ಎದೆಗೆ ಬಾಲ್ ತಾಗಿ ಪಾರ್ಥಿವ್ ಪಟೇಲ್ ಕ್ರೀಸ್ ನಲ್ಲೇ ಕುಸಿದುಬಿದ್ದರೆ ಕೀಳು ಅಭಿರುಚಿ ತೋರಿಸಿದ ಡೇಲ್ ಸ್ಟೇನ್

ಬುಧವಾರ, 17 ಜನವರಿ 2018 (09:12 IST)
ಸೆಂಚೂರಿಯನ್: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳ ನಡುವೆ ಮಾನಸಿಕ ಕದನವೂ ಆರಂಭವಾಗಿದೆ. ಪಾರ್ಥಿವ್ ಪಟೇಲ್ ಆಫ್ರಿಕಾ ಬೌಲರ್ ನಿಗಿಡಿ ಬಾಲ್ ಎದೆಗೆ ತಾಗಿ ಕುಸಿದು ಬಿದ್ದಾಗ ಟ್ವಿಟರ್ ನಲ್ಲಿ ವೇಗಿ ಡೇಲ್ ಸ್ಟೇನ್ ಮಾಡಿರುವ ಟ್ವೀಟ್ ಒಂದು ಚರ್ಚೆಗೆ ಗ್ರಾಸವಾಗಿದೆ.
 

ನಿಗಿಡಿ ಎಸೆದ ಎಸೆತವೊಂದು ಪಾರ್ಥಿವ್ ಎದೆಗೆ ತಾಗಿ ತಕ್ಷಣವೇ ಅವರು ಕುಸಿದುಬಿದ್ದಿದ್ದರು. ಈ ಸಂದರ್ಭದಲ್ಲಿ ನಿಗಿಡಿ ಬ್ಯಾಟ್ಸ್ ಮನ್ ಯೋಗ ಕ್ಷೇಮ ವಿಚಾರಿಸಲು ಬಾರದೇ ಮತ್ತೆ ಬೌಲಿಂಗ್ ಗೆ ತಯಾರಾಗಿ ನಿಂತಿದ್ದರು.

ಇದರ ಬಗ್ಗೆ ಟ್ವೀಟ್ ಮಾಡಿರುವ ಗಾಯಗೊಂಡ ಸರಣಿಯಿಂದ ಔಟ್ ಆಗಿರುವ ವೇಗಿ ಡೇಲ್ ಸ್ಟೇನ್ ‘ಪಿಪಿ ಡೌನ್  ಆದ ಮೇಲೆಯೂ ನಿಗಿಡಿ ಮತ್ತೆ ಬೌಲಿಂಗ್ ಗೆ ರೆಡಿಯಾಗಿದ್ದು ನೋಡಲು ಖುಷಿಯಾಗುತ್ತಿದೆ’ ಎಂದು ಟ್ವೀಟ್ ಮಾಡಿದ್ದಾರೆ. ಎದುರಾಳಿಯನ್ನು ವಿಚಾರಿಸದ ತಮ್ಮ ತಂಡದ ಬೌಲರ್ ನನ್ನು ಸಮರ್ಥಿಸಿಕೊಂಡ ಸ್ಟೇನ್ ಬಗ್ಗೆ ಭಾರತೀಯ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ