ಗೆಲುವಿನ ಹುಡುಕಾಟದಲ್ಲಿ ಟೀಂ ಇಂಡಿಯಾ

ಮಂಗಳವಾರ, 16 ಜನವರಿ 2018 (16:22 IST)
ಸೆಂಚೂರಿಯನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿಗಾಗಿ ಬೆವರು ಸುರಿಸುತ್ತಿದೆ. ಆದರೆ ಸುಲಭವಾಗಿ ವಿಕೆಟ್ ಗಳಿಸಲು ಸಾಧ್ಯವಾಗದೇ ಪರದಾಡುತ್ತಿದೆ.
 

ನಾಲ್ಕನೇ ದಿನದ ಊಟದ ವಿರಾಮದ ವೇಳೆಗೆ ಆಫ್ರಿಕಾ 5 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿದ್ದು, ಒಟ್ಟಾರೆ 201 ರನ್ ಗಳ ಮುನ್ನಡೆ ಸಾಧಿಸಿದೆ. ಟೀಂ ಇಂಡಿಯಾ ಪರ ಮೊಹಮ್ಮದ್ ಶಮಿ 3 ವಿಕೆಟ್ , ಜಸ್ಪ್ರೀತ್ ಬುಮ್ರಾ 2 ವಿಕೆಟ್ ಗಳಿಸಿದ್ದಾರೆ.

ಆಫ್ರಿಕಾವನ್ನು ಮುಂದಿನ 60-80 ರನ್ ಗಳೊಳಗೆ ಆಲೌಟ್ ಮಾಡದಿದ್ದರೆ ಟೀಂ ಇಂಡಿಯಾಗೆ ಗೆಲುವು ಕಷ್ಟ. ಆದರೆ ಮೊದಲ ಇನಿಂಗ್ಸ್ ನಲ್ಲಿ ಮೋಡಿ ಮಾಡಿದ್ದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಗೆ ಯಾಕೋ ಎರಡನೇ ಇನಿಂಗ್ಸ್ ನಲ್ಲಿ ಅದೃಷ್ಟ ಕೈ ಹಿಡಿದಿಲ್ಲ. ಸಾಕಷ್ಟು ಪ್ರಯಾಸ ಪಡುತ್ತಿದ್ದರೂ ಉಳಿದ ಬೌಲರ್ ಗಳಿಗೆ ವಿಕೆಟ್ ಗಳಿಸಲು ಕಷ್ಟವಾಗುತ್ತಿದೆ. ಇದರಿಂದಾಗಿ ಟೀಂ ಇಂಡಿಯಾ ಗೆಲುವಿಗಾಗಿ ತಿಣುಕಾಡುವಂತಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ