ವಿಕೆಟ್ ಕಿತ್ತ ಎದುರಾಳಿ ಬೌಲರ್ ಮೇಲೆ ಉಗ್ರಾವತಾರ ತಾಳಿದ ವಿರಾಟ್ ಕೊಹ್ಲಿ!

ಬುಧವಾರ, 17 ಜನವರಿ 2018 (08:53 IST)
ಸೆಂಚೂರಿಯನ್: ದ.ಆಫ್ರಿಕಾಗೆ ಕಾಲಿಟ್ಟಾಗಿನಿಂದ ಒಂದೇ ಒಂದು ಗೆಲುವಿನ ರುಚಿ ಕಾಣದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅದೂ ಸಾಲದೆಂಬಂತೆ ತಮ್ಮ ವರ್ತನೆಯಿಂದ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ.
 

ಕೊಹ್ಲಿ ಮೈದಾನದಲ್ಲಿ ಆಕ್ರಮಣಕಾರಿಯಾಗಿರುವುದು ಹೊಸತೇನಲ್ಲ. ಪದೇ ಪದೇ ಅಂಪಾಯರ್ ಗೆ ದೂರು ನೀಡಿ ಪಂದ್ಯದ ಸಂಭಾವನೆಯ ಶೇ. 25 ರಷ್ಟು ದಂಡ ಹಾಕಿಸಿಕೊಂಡ ಬೆನ್ನಲ್ಲೇ ಕೊಹ್ಲಿ ಮತ್ತೊಮ್ಮೆ ಮೈದಾನದಲ್ಲಿ ಎಗರಾಡಿದ್ದಾರೆ.

ಅದು ದ್ವಿತೀಯ ಇನಿಂಗ್ಸ್ ನಲ್ಲಿ ತಮ್ಮ ವಿಕೆಟ್ ಪಡೆದ ಆಫ್ರಿಕಾ ವೇಗಿ ಲುಂಗಿ ನಿಗಿಡಿ ಮೇಲೆ. ಕೊಹ್ಲಿಯನ್ನು ಎಲ್ ಬಿಡಬ್ಲ್ಯು ಬಲೆಗೆ ಬೀಳಿಸಿದ ನಿಗಿಡಿ ವಿಕೆಟ್ ಪಡೆದ ಸಂಭ್ರಮಾಚರಣೆ ಮಾಡುವಾಗ ದ.ಆಫ್ರಿಕಾ ಪೆವಿಲಿಯನ್ ನತ್ತ ತಿರುಗಿ ಪಂಚ್ ಮಾಡಿ ಕುಣಿದಾಡಿದ್ದರು. ಇದು ಕೊಹ್ಲಿ ಕೆಂಗಣ್ಣಿಗೆ ಗುರಿಯಾಯಿತು.

ಪೆವಿಯಲಿನ್ ಕಡೆಗೆ ಹೆಜ್ಜೆ ಹಾಕುತ್ತಿದ್ದ ಕೊಹ್ಲಿ ದ.ಆಫ್ರಿಕಾ ಆಟಗಾರರ ಗುಂಪಿನ ಕಡೆಗೆ ಹಿಂತಿರುಗಿ ನಿಂತು ಉರಿನೋಟ ಬೀರುತ್ತಾ ನಿಂತರು. ನಂತರ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದರು. ನಿಗಿಡಿಗೆ ಕೊಹ್ಲಿಯನ್ನು ಕೆರಳಿಸುವ ಯಾವ ಉದ್ದೇಶವೂ ಇದ್ದಂತಿರಲಿಲ್ಲ. ಅವರು ತಮ್ಮ ಪಾಡಿಗೆ ಸಂಭ್ರಮಚಾರಣೆ ಮಾಡಿದರೆ ಕೊಹ್ಲಿ ಉರಿದುಬಿದ್ದಿದ್ದು ಟೀಕೆಗೆ ಗುರಿಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ