ಅನುಷ್ಕಾ ಫೋಟೋಗೆ ಡೇವಿಡ್ ವಾರ್ನರ್ ಮಾಡಿದ ಕಾಮೆಂಟ್ ಟ್ರೋಲ್: ನೆರವಿಗೆ ಬಂದ ಕೊಹ್ಲಿ
ಕೊನೆಗೆ ಸ್ವತಃ ಕೊಹ್ಲಿಯೇ ಕಾಮೆಂಟ್ ಮಾಡಿ ಟ್ರೋಲಿಗರ ಬಾಯಿ ಮುಚ್ಚಿಸಬೇಕಾಯಿತು. ಅನುಷ್ಕಾ ಫೋಟೋಗೆ ವಾರ್ನರ್ ನೀನು ತುಂಬಾ ಅದೃಷ್ಟವಂತ ಎಂದು ಕಾಮೆಂಟ್ ಮಾಡಿದ್ದರು.
ಇದನ್ನು ನೋಡಿ ನೆಟ್ಟಿಗರು ಇನ್ನೊಬ್ಬರ ಪತ್ನಿಗೆ ಈ ರೀತಿಯ ಕಾಮೆಂಟ್ ಮಾಡಬೇಡಿ. ಇದು ಸಭ್ಯತೆಯಲ್ಲ ಎಂದು ಕೆಲವರು ವ್ಯಂಗ್ಯ ಮಾಡಿದ್ದಾರೆ. ಮತ್ತೆ ಕೆಲವರು ಮತ್ತೆ ನೀವು ಮನೆಗೆ ಹೋದಾಗ ಪತ್ನಿ ಜೊತೆ ಹುಷಾರು ಎಂದು ಟ್ರೋಲ್ ಮಾಡಿದ್ದರು. ಇದೆಲ್ಲಾ ಬೆಳವಣಿಗೆ ಬಳಿಕ ಕೊಹ್ಲಿ ವಾರ್ನರ್ ಕಾಮೆಂಟ್ ಗೆ ಪ್ರತಿಕ್ರಿಯಿಸಿದ್ದು, ನನಗೆ ಗೊತ್ತು ಗೆಳೆಯ ಎಂದು ಟ್ರೋಲಿಗರ ಬಾಯಿ ಮುಚ್ಚಿಸಿದ್ದಾರೆ.