ಆಂಟಿಗುವಾ: ಅದೆಷ್ಟು ಜನ ಧೋನಿ ಬ್ಯಾಟಿಂಗ್ ಶೈಲಿಯ ಬಗ್ಗೆ ತಾತ್ಸಾರ ಮಾಡಿದ್ದರೋ. ಅಂತಹ ಟೀಕಾಕಾರರ ಬಾಯ್ಮುಚ್ಚಿಸುವ ದಾಖಲೆಯನ್ನು ಧೋನಿ ಮಾಡಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ತೃತೀಯ ಟೆಸ್ಟ್ ಪಂದ್ಯದಲ್ಲಿ ತಂಡದ ಪರ ಗರಿಷ್ಠ (78) ರನ್ ಗಳಿಸಿದ ಧೋನಿ ಏಕದಿನ ಇತಿಹಾಸದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಒಬ್ಬರು ಗರಿಷ್ಠ ರನ್ ಗಳಿಸಿದ ದ್ವಿತೀಯ ಆಟಗಾರ ಎಂಬ ದಾಖಲೆ ಮಾಡಿದರು. ಆಸ್ಟ್ರೇಲಿಯಾದ ಆಡಂ ಗಿಲ್ ಕ್ರಿಸ್ಟ್ ಈ ದಾಖಲೆ ಮಾಡಿದ ಪ್ರಥಮ ಆಟಗಾರ. ಅವರ ದಾಖಲೆಯನ್ನು ಧೋನಿ ಮುರಿದಿದ್ದಾರೆ.
ಒಟ್ಟು 294 ಪಂದ್ಯಗಳಿಂದ ಧೋನಿ 9442 ರನ್ ಗಳಿಸಿದ್ದಾರೆ. ಇದರಲ್ಲಿ 10 ಶತಕ ಮತ್ತು 63 ಅರ್ಧಶತಕ ಸೇರಿದೆ. ಗಿಲ್ ಕ್ರಿಸ್ಟ್ ಒಟ್ಟು 284 ಪಂದ್ಯಗಳಿಂದ 9410 ರನ್ ಗಳಿಸಿದ್ದಾರೆ. ಶ್ರೀಲಂಕಾದ ಕುಮಾರ ಸಂಗಕ್ಕಾರ 13341 ರನ್ ಗಳಿಸಿ ಮೊದಲ ಸ್ಥಾನ ಗಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.