ಹೊಸ ಲುಕ್ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಕೊಟ್ಟ ಧೋನಿ

ಸೋಮವಾರ, 3 ಆಗಸ್ಟ್ 2020 (09:48 IST)
ರಾಂಚಿ: ಐಪಿಎಲ್ ಗೆ ಕೆಲವೇ ದಿನಗಳು ಬಾಕಿಯಿರುವಂತೇ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ಅಭಿಮಾನಿಗಳಿಗೆ ಹೊಸ ಲುಕ್ ಮೂಲಕ ಅಚ್ಚರಿ ಕೊಟ್ಟಿದ್ದಾರೆ.


ಕ್ರಿಕೆಟ್ ನಿಂದ ದೂರವುಳಿದಿದ್ದ ಧೋನಿ ಉದ್ದ ಗಡ್ಡ, ಕೂದಲು ಬೆಳೆಸಿಕೊಂಡು ಫಾರ್ಮ್ ಹೌಸ್ ನಲ್ಲಿ ತಮ್ಮ ಕುಟುಂಬದೊಂದಿಗೆ ಕಾಲ ಕಳೆಯುತ್ತಿರುವ ಫೋಟೋಗಳು ಇಷ್ಟು ದಿನ ಹರಿದಾಡಿತ್ತು.

ಆದರೆ ಇದೀಗ ಧೋನಿ ಐಪಿಎಲ್ ಗೆ ಕೆಲವೇ ದಿನಗಳು ಬಾಕಿಯಿರುವಂತೇ ತಮ್ಮ ಲುಕ್ ಬದಲಾಯಿಸಿದ್ದು, ಗಡ್ಡ ಸಂಪೂರ್ಣವಾಗಿ ಶೇವ್ ಮಾಡಿ ಕೂದಲು ಕತ್ತರಿಸಿಕೊಂಡು ಮೈದಾನಕ್ಕಿಳಿಯಲು ರೆಡಿಯಾಗಿದ್ದಾರೆ. ಅವರ ಈ ಹೊಸ ಲುಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ