ಇಂದೂ ನಡೆಯುತ್ತಾ ರೋಹಿತ್ ಶರ್ಮಾ ಮ್ಯಾಜಿಕ್?

ಭಾನುವಾರ, 17 ಡಿಸೆಂಬರ್ 2017 (08:29 IST)
ವಿಶಾಖಪಟ್ಟಣ: ಇಂದು ಭಾರತ ಮತ್ತು ಶ್ರೀಲಂಕಾ ನಡುವಿನ ಮೂರನೇ ಮತ್ತು ಅಂತಿಮ ಏಕದಿನ ವಿಶಾಖಪಟ್ಟಣದಲ್ಲಿ ನಡೆಯಲಿದೆ. ಆದರೆ ಎರಡೂ ತಂಡಗಳು ಒಂದೊಂದು ಪಂದ್ಯ ಗೆದ್ದಿರುವುದರಿಂದ ಈ ಪಂದ್ಯಕ್ಕೆ ಫೈನಲ್ ಪಂದ್ಯದ ಕಳೆ ಬಂದಿದೆ.
 

ಆದರೆ ಕಳೆದ ಪಂದ್ಯದಲ್ಲಿ ಭಾರತ ಆಡಿದ ರೀತಿ ನೋಡಿದರೆ ಈ ಸರಣಿ ಅತಿಥೇಯ ತಂಡಕ್ಕೆ ಸುಲಭ ತುತ್ತು ಎನ್ನುವುದು ಖಚಿತ. ಕಳೆದ ಪಂದ್ಯದಲ್ಲಿ ವಿಶ್ವದಾಖಲೆಯ ದ್ವಿಶತಕ ಸಿಡಿಸಿದ್ದ ರೋಹಿತ್ ಬ್ಯಾಟ್ ನಿಂದ ಮತ್ತೊಂದು ಭರ್ಜರಿ ಇನಿಂಗ್ಸ್ ಬರಲಿ ಎಂದು ಪ್ರೇಕ್ಷಕರು ಕಾಯುತ್ತಿದ್ದಾರೆ.

ಕಳೆದ ಪಂದ್ಯ ನಡೆದಿದ್ದು ಸಂಪೂರ್ಣ ಸಪಾಟೆ ಪಿಚ್ ನಲ್ಲಿ. ಆದರೆ ವಿಶಾಖಪಟ್ಟಣದಲ್ಲಿ ನಡೆದ ಹಿಂದಿನ ಪಂದ್ಯಗಳಲ್ಲಿ ಸ್ಪಿನ್ನರ್ ಗಳು ಕೈ  ಚಳಕ ಮೆರೆದಿದ್ದರು. ಹಾಗಾಗಿ ಭಾರತದ ಯುವ ಸ್ಪಿನ್ನರ್ ಗಳಿಗೆ ಇದು ಶುಭ ಸುದ್ದಿಯೇ.

ಆದರೆ ಲಂಕಾಕ್ಕೆ ಬ್ಯಾಟಿಂಗ್ ನದ್ದೇ ಚಿಂತೆ. ಅವರ ಆರಂಭಿಕರು ಇನ್ನೂ ತಂಡಕ್ಕೆ ಉತ್ತಮ ಆರಂಭ ಒದಗಿಸಿಲ್ಲ. ಹೀಗಾಗಿ ನಿರ್ಬೀಡೆಯಿಂದ ಇತರ ಬ್ಯಾಟ್ಸ್ ಮನ್ ಗಳು ತಮ್ಮ ಶಾಟ್ ಸೆಲೆಕ್ಷನ್ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ಈ ಪಂದ್ಯದಲ್ಲಾದರೂ ಫಾರ್ಮ್ ಕಂಡುಕೊಳ್ಳುವ ವಿಶ್ವಾಸದಲ್ಲಿ ನಾಯಕ ತಿಸರಾ ಪೆರೇರಾ ಇದ್ದಾರೆ.

ಪಂದ್ಯ ಸಮಯ: ಮಧ್ಯಾಹ್ನ 1.30
ಸ್ಥಳ: ವಿಶಾಖಪಟ್ಟಣ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ ವರ್ಕ್

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ