ಧೋನಿ ಕಾಶ್ಮೀರ ಭೇಟಿ ಸಂದರ್ಭ ಅಫ್ರಿದಿ ಪರ ಘೋಷಣೆ (ವಿಡಿಯೋ)
ಬುಧವಾರ, 29 ನವೆಂಬರ್ 2017 (09:54 IST)
ನವದೆಹಲಿ: ಇತ್ತೀಚೆಗಷ್ಟೇ ಜಮ್ಮು ಕಾಶ್ಮೀರದ ಸೇನಾ ನೆಲೆಗೆ ಭೇಟಿ ನೀಡಿದ್ದ ಕ್ರಿಕೆಟಿಗ ಧೋನಿಗೆ ಅಭಿಮಾನಿಗಳ ಗುಂಪಿನೆಡೆಯಿಂದ ಪಾಕ್ ಪರ ಘೋಷಣೆಯ ಸ್ವಾಗತವೂ ಸಿಕ್ಕಿದೆ.
ಧೋನಿ ಬಂದ ಸಂಭ್ರಮದಲ್ಲಿ ಗುಂಪು ಸೇರಿದ್ದ ಅಭಿಮಾನಿಗಳನ್ನು ನಿಯಂತ್ರಿಸಲು ಯೋಧರು ಒಂದೆಡೆ ಪ್ರಯಾಸ ಪಡುತ್ತಿದ್ದರೆ, ಇನ್ನೊಂದೆಡೆ ಅದೇ ಗುಂಪಿನ ಮಧ್ಯದಿಂದ ಪಾಕ್ ಕ್ರಿಕೆಟಿಗ ಶಾಹಿದ್ ಅಫ್ರಿದಿ ಪರ ಘೋಷಣೆ ಕೂಗಿ ಕಿಡಿಗೇಡಿಗಳು ಧೋನಿಗೆ ಅವಮಾನ ಮಾಡಿದ್ದಾರೆ. ಆ ವಿಡಿಯೋ ಇಲ್ಲಿದೆ ನೋಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ