ಹರ್ಭಜನ್ ಸಿಂಗ್ ಪರ ಪತ್ನಿ ಗೀತಾ ಬ್ಯಾಟಿಂಗ್

ಸೋಮವಾರ, 13 ಏಪ್ರಿಲ್ 2020 (11:05 IST)
ಮುಂಬೈ: ಪಾಕ್ ಕ್ರಿಕೆಟಿಗ ಶಾಹಿದ್ ಅಫ್ರಿದಿ ಫೌಂಡೇಷನ್ ಗೆ ನೆರವಾಗಿ ಟೀಕೆಗೆ ಗುರಿಯಾಗಿದ್ದ ಟೀಂ ಇಂಡಿಯಾ ಕ್ರಿಕೆಟಿಗ ಹರ್ಭಜನ್ ಸಿಂಗ್ ಪರ ಪತ್ನಿ ಗೀತಾ ಬಸ್ರಾ ಬ್ಯಾಟ್ ಮಾಡಿದ್ದಾರೆ.


ಕೆಲವರಿಗೆ ತಪ್ಪು ಹುಡುಕುವುದೇ ಕೆಲಸ. ಆದರೆ ನನ್ನ ಪತಿ ಯಾವತ್ತೂ ಭಾರತಕ್ಕಾಗಿಯೇ ಜೀವನ ಮುಡಿಪಾಗಿಟ್ಟಿದ್ದಾರೆ, ಮುಂದೆ ಸಾಯುವುದಿದ್ದರೂ ಭಾರತಕ್ಕಾಗಿಯೇ ಎಂದಿದ್ದಾರೆ.

‘ತನ್ನ ದೇಶ ತನಗೆ ಏನಾಗಬೇಕೆಂದು ಅವರಿಗೆ ಗೊತ್ತು. ಅವರು ಮಾನವೀಯತೆಯಿಂದ ಸಹಾಯ ಮಾಡಿದ್ದರಷ್ಟೇ. ಅವರಿಗೆ ದೇಶವೇ ಮೊದಲು. ಅವರು ಕ್ರಿಕೆಟ್ ಆಡುವಾಗಲೂ ಅಷ್ಟೇ. ಇದು ಎಲ್ಲರಿಗೂ ಗೊತ್ತು’ ಎಂದು ಗೀತಾ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ