10 ಸಾವಿರ ಕೆಜಿ ಅಕ್ಕಿ, 700 ಕೆಜಿ ಆಲೂಗಡ್ಡೆ: ಇದು ಕ್ರಿಕೆಟಿಗ ಪಠಾಣ್ ಬ್ರದರ್ಸ್ ಸೇವೆ

ಸೋಮವಾರ, 6 ಏಪ್ರಿಲ್ 2020 (10:40 IST)
ಮುಂಬೈ: ಲಾಕ್ ಡೌನ್ ನಿಂದಾಗಿ ನಿತ್ಯ ಊಟಕ್ಕೆ ಪರಿತಪಿಸುತ್ತಿರುವ ನೂರಾರು ಬಡವರಿಗೆ ಕ್ರಿಕೆಟಿಗ ಸಹೋದರರಾದ ಯೂಸುಫ್ ಪಠಾಣ್ ಮತ್ತು ಇರ್ಫಾನ್ ಪಠಾಣ್ ವಿಶಿಷ್ಟವಾಗಿ ನೆರವಾಗಿದ್ದಾರೆ.


ಪಠಾಣ್ ಬ್ರದರ್ಸ್ ಕೊರೋನಾ ಭಾರತದಲ್ಲಿ ಹಾವಳಿಯಿಡುತ್ತಿದ್ದಂತೇ ತಮ್ಮ ಕೈಲಾದಷ್ಟು ಬಡವರಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಿಸಿ ಸುದ್ದಿಯಾಗಿದ್ದರು.

ಇದೀಗ ಬಡವರ ನೆರವಿಗೆ 10 ಸಾವಿರ ಕೆಜಿ ಅಕ್ಕಿ ಮತ್ತು 700 ಕೆಜಿ ಆಲೂಗಡ್ಡೆ ವಿತರಿಸಿ ನೆರವಾಗಿದ್ದಾರೆ. ಕೊರೋನಾ ವಿರುದ್ಧದ ಹೋರಾಟದಲ್ಲಿ ಸರ್ಕಾರಕ್ಕೆ ನಮ್ಮಿಂದ ಎಷ್ಟು ನೆರವು ನೀಡಲು ಸಾಧ‍್ಯವೋ ಅಷ್ಟು ಮಾಡುವುದಾಗಿ ಪಠಾಣ್ ಸಹೋದರರು ಹೇಳಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ