ಮುಳುಗುತ್ತಿದ್ದ ಟೀಂ ಇಂಡಿಯಾಗೆ ಹೇಗೆ ಬ್ಯಾಟಿಂಗ್ ಮಾಡಬೇಕೆಂದು ಹೇಳಿಕೊಟ್ಟ ಪಾಂಡ್ಯ

ಭಾನುವಾರ, 7 ಜನವರಿ 2018 (05:50 IST)
ಕೇಪ್ ಟೌನ್: ಹಾರ್ದಿಕ್ ಪಾಂಡ್ಯ ಈ ಕೆಲಸ ಮಾಡುತ್ತಿರುವುದು ಇದು ಎರಡನೇ ಬಾರಿ. ಕಳೆದ ಬಾರಿ ಮುಳುಗುತ್ತಿರುವ ಟೀಂ ಇಂಡಿಯಾಗೆ ಅವರು ಆಸರೆಯಾಗಿದ್ದು ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ. ಇದೀಗ ಮತ್ತೊಮ್ಮೆ ಅದೇ ಕೆಲಸ ದ.ಆಫ್ರಿಕಾ ವಿರುದ್ಧ ಮಾಡಿದ್ದಾರೆ.
 

ಬಹುಶಃ ಪಾಂಡ್ಯ ಹೊಡೆದ ಆ 93 ರನ್ ಗಳಿಲ್ಲದೇ ಹೋಗಿದ್ದರೆ ಟೀಂ ಇಂಡಿಯಾ ಸ್ಥಿತಿ ಹೀನಾಯವಾಗಿರುತ್ತಿತ್ತು. ಒತ್ತಡದ ಸನ್ನಿವೇಶದಲ್ಲಿ ನಿಧಾನವಾಗಿ ಇನಿಂಗ್ಸ್ ಕಟ್ಟುವ ಚೇತೇಶ್ವರ ಪೂಜಾರ ಇಂದೂ ಕೂಡಾ ಅದೇ ಕೆಲಸ ಮಾಡಿದರು. 

ಆದರೆ ಹೇಗಿದ್ದರೂ ಮುಳುಗುತ್ತಿರುವ ನೌಕೆ. ಎಷ್ಟು ಸಾಧ್ಯವೋ ಅಷ್ಟು ಬಾಚಿಕೊಂಡು ಬಿಡಬೇಕು ಎಂಬ ಪಾಂಡ್ಯ ನಿಲುವಿನಿಂದ ಭಾರತದ ಮಾನ ಉಳಿಯಿತು. 95 ಬಾಲ್ ಗಳಲ್ಲಿ ಅವರು ಒಂದು ಸಿಕ್ಸರ್ ಸಹಿತ 93 ರನ್ ಗಳಿಸಿದರು.

ಮೊದಲ ದಿನ ಇದೇ ಕೆಲಸವನ್ನು ಎಬಿಡಿ ವಿಲಿಯರ್ಸ್ ಮಾಡಿದ್ದರು. ಅವರೂ ಕೂಡಾ ತಂಡ ಕುಸಿತ ಕಾಣುತ್ತಿದ್ದರೂ ತಾವು ಮಾತ್ರ ತಮ್ಮ ನ್ಯಾಚುರಲ್ ಗ್ಯಾಮ್ ಆಡಿದರು. ಹೀಗಾಗಿ ಆಫ್ರಿಕಾ ಒತ್ತಡದಿಂದ ಹೊರಬಂತು. ಇದನ್ನೇ ಪಾಂಡ್ಯ ಕೂಡಾ ಮಾಡಿದರು. ಆದರೆ ಅವರಿಗೆ ತಕ್ಕ ಸಾಥ್ ಸಿಗಲಿಲ್ಲ ಎನ್ನುವುದು ವಿಪರ್ಯಾಸ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ