ಕೊರೋನಾ ಭೀತಿಯಿಂದ ಚೆನ್ನೈ ಬಿಟ್ಟ ಧೋನಿ

ಸೋಮವಾರ, 16 ಮಾರ್ಚ್ 2020 (09:12 IST)
ಚೆನ್ನೈ: ಕೊರೋನಾವೈರಸ್ ಭೀತಿಯಿಂದಾಗಿ ಐಪಿಎಲ್ ಅನಿಶ್ಚಿತತೆಯಲ್ಲಿದ್ದರೆ, ಈಗಾಗಲೇ ಸಿದ್ಧತಾ ಶಿಬಿರ ಆರಂಭಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಕೂಡಾ ಪ್ರಾಕ್ಟೀಸ್ ನಿಲ್ಲಿಸಿದೆ.


ಇದೀಗ ‘ತಲಾ’ ಧೋನಿ ಕೂಡಾ ಕೊರೋನಾ ಭೀತಿಯಿಂದಾಗಿ ಚೆನ್ನೈ ಬಿಟ್ಟು ತವರಿಗೆ ಮರಳಿದ್ದಾರೆ. ಹೇಗಿದ್ದರೂ ಐಪಿಎಲ್ ಮುಂದೂಡಿಕೆಯಾಗಿದೆ. ಹೀಗಾಗಿ ಧೋನಿ ಕೂಡಾ ಚೆನ್ನೈ ಬಿಟ್ಟು ಸುರಕ್ಷತಾ ದೃಷ್ಟಿಯಿಂದ ತವರು ಸೇರಿಕೊಂಡಿದ್ದಾರೆ.

ಧೋನಿ ಚಿಪಾಕ್ ಮೈದಾನದಲ್ಲಿ ಪ್ರಾಕ್ಟೀಸ್ ನಡೆಸುತ್ತಿದ್ದಷ್ಟೂ ದಿನವೂ ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಸೇರುತ್ತಿದ್ದರು. ಈ ವೇಳೆ ಹಲವರು ಆಟೋಗ್ರಾಫ್, ಸೆಲ್ಫೀಗಾಗಿ ಮುಗಿಬೀಳುತ್ತಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ