ಫಸ್ಟ್ ನೈಟ್ ವಿಡಿಯೋ ಹಾಕಿದ್ರಾ?! ಟ್ರೋಲ್ ಆದ ಕೆಎಲ್ ರಾಹುಲ್

ಬುಧವಾರ, 1 ಫೆಬ್ರವರಿ 2023 (09:00 IST)
Photo Courtesy: Instagram
ಮುಂಬೈ: ಇತ್ತೀಚೆಗಷ್ಟೇ ವಿವಾಹವಾದ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಇದೀಗ ಪತ್ನಿ ಅಥಿಯಾ ಜೊತೆಗಿನ ರೊಮ್ಯಾಂಟಿಕ್ ವಿಡಿಯೋ ಒಂದನ್ನು ಪ್ರಕಟಿಸಿ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದಾರೆ.

ಮದುವೆಯ ಸಂದರ್ಭದ ರೊಮ್ಯಾಂಟಿಕ್ ವಿಡಿಯೋವನ್ನು ರಾಹುಲ್ ಪ್ರಕಟಿಸಿದ್ದದರು. ಈ ವಿಡಿಯೋದಲ್ಲಿ ರಾಹುಲ್ ಅಥಿಯಾಗೆ ರೊಮ್ಯಾಂಟಿಕ್ ಆಗಿ ಚುಂಬಿಸುವ ದೃಶ್ಯವಿದೆ. ಇಬ್ಬರ ರೊಮ್ಯಾಂಟಿಕ್ ವಿಡಿಯೋ ನೋಡಿದ ನೆಟ್ಟಿಗರು ಇದೇನು ಫಸ್ಟ್ ನೈಟ್ ವಿಡಿಯೋನಾ ಎಂದು ಟ್ರೋಲ್ ಮಾಡಿದ್ದಾರೆ.

ರಾಹುಲ್ ನೀವು ಸದ್ಯಕ್ಕಂತೂ ಕ್ರಿಕೆಟ್ ಕಡೆಗೆ ಗಮನ ಕೊಡಲ್ಲ ಬಿಡಿ ಎಂದು ಕೆಲವರು ಟ್ರೋಲ್ ಮಾಡಿದರೆ ಮತ್ತೆ ಕೆಲವರು ಸಾಕು ಬಿಡಿ ಎಷ್ಟು ಹೆಂಡತಿ ಜೊತೆಗಿನ ವಿಡಿಯೋ ಹಾಕ್ತೀರಿ, ಸ್ವಲ್ಪ ಕ್ರಿಕೆಟ್ ಕಡೆಗೂ ಗಮನ ಕೊಡಿ ಎಂದು ಸಲಹೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ