ಸಚಿನ್, ಅಕ್ಷಯ್ ಕುಮಾರ್ ಟ್ವೀಟ್ ತನಿಖೆ ಮಾಡಲು ಮುಂದಾದ ಮಹಾ ಸರ್ಕಾರ
ಮಂಗಳವಾರ, 9 ಫೆಬ್ರವರಿ 2021 (08:59 IST)
ಮುಂಬೈ: ರೈತ ಪ್ರತಿಭಟನೆ ಬಗ್ಗೆ ಟ್ವೀಟ್ ಮಾಡಿದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್, ಅಕ್ಷಯ್ ಕುಮಾರ್ ಟ್ವೀಟ್ ಬಗ್ಗೆ ಈಗ ಮಹಾರಾಷ್ಟ್ರದ ಶಿವಸೇನೆ ನೇತೃತ್ವದ ಸರ್ಕಾರ ತನಿಖೆ ನಡೆಸಲು ಮುಂದಾಗಿದೆ.
ಸಚಿನ್, ಅಕ್ಷಯ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ವಿದೇಶೀಯರು ಭಾರತದ ಆಂತರಿಕ ವಿಚಾರದಲ್ಲಿ ತಲೆ ಹಾಕುವುದನ್ನು ಖಂಡಿಸಿ ಟ್ವೀಟ್ ಮಾಡಿದ್ದರು. ಆದರೆ ಈ ಟ್ವೀಟ್ ಕೇಂದ್ರದ ಬಿಜೆಪಿ ಸರ್ಕಾರದ ಒತ್ತಡದಿಂದಾಗಿ ಮಾಡಿದ್ದೇ ಎಂಬ ಕುರಿತು ಮಹಾ ಸರ್ಕಾರ ತನಿಖೆ ನಡೆಸಲಿದೆ.