‘ಚಕ್ಕಾ ಜ್ಯಾಮ್’ ತಡೆಯಲು ದೆಹಲಿ ಪೊಲೀಸರಿಂದ ಫುಲ್ ತಯಾರಿ

ಶನಿವಾರ, 6 ಫೆಬ್ರವರಿ 2021 (09:52 IST)
ನವದೆಹಲಿ: ಕೃಷಿ ಕಾಯ್ದೆ ವಿರೋಧಿಸಿ ಇಂದು ದೆಹಲಿಯಲ್ಲಿ ರೈತರು ನಡೆಸಲು ಉದ್ದೇಶಿಸಿರುವ ಹೆದ್ದಾರಿ ತಡೆ ‘ಚಕ್ಕಾ ಜ್ಯಾಮ್’ ಪ್ರತಿಭಟನೆಯಲ್ಲಿ ಅಹಿತಕರ ಘಟನೆಗಳಾಗದಂತೆ ದೆಹಲಿ ಪೊಲೀಸರು ಭರ್ಜರಿ ತಯಾರಿ ನಡೆಸಿದ್ದಾರೆ.

 

ದೆಹಲಿಯನ್ನು ಸಂಪರ್ಕಿಸುವ ಹೆದ್ದಾರಿಗಳಲ್ಲಿ ಭಾರೀ ಪ್ರಮಾಣದಲ್ಲಿ ಬ್ಯಾರಿಕೇಡ್ ಗಳನ್ನು ನಿರ್ಮಿಸಲಾಗಿದೆ. ಗಣರಾಜ್ಯೋತ್ಸವದಂದು ನಡೆದ ಪ್ರತಿಭಟನೆಯಲ್ಲಿ ಪರಿಸ್ಥಿತಿ ಕೈ ಮೀರಿ ಹೋಗಿತ್ತು. ಇಂತಹ ಘಟನೆಗಳು ಮತ್ತೆ ಪುನರಾವರ್ತಿಸದಂತೆ ಪೊಲೀಸರು ಬಿಗಿ ಬಂಧೋಬಸ್ತ್ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ