13 ವರ್ಷದಲ್ಲೇ ಕೆಎಲ್ ರಾಹುಲ್ ಭವಿಷ್ಯ ನುಡಿದಿದ್ದ ರಾಹುಲ್ ದ್ರಾವಿಡ್!

ಬುಧವಾರ, 20 ಮೇ 2020 (10:17 IST)
ಬೆಂಗಳೂರು: ಟೀಂ ಇಂಡಿಯಾದಲ್ಲಿ ಸದ್ಯ ಅಗ್ರ ಸಾಲಿನಲ್ಲಿರುವ ಕ್ರಿಕೆಟಿಗರ ಪೈಕಿ ಕೆಎಲ್ ರಾಹುಲ್ ಒಬ್ಬರು. ರಾಹುಲ್ ಪ್ರತಿಭೆ ಬಗ್ಗೆ ಅವರು ಚಿಕ್ಕವರಿದ್ದಾಗಲೇ ‘ವಾಲ್’ ರಾಹುಲ್ ದ್ರಾವಿಡ್ ಭವಿಷ್ಯ ನುಡಿದಿದ್ದರಂತೆ!


ಹೀಗಂತ ರಾಹುಲ್ ಅವರ ಬಾಲ್ಯದ ಕೋಚ್ ಜಯರಾಜ್ ಹೇಳಿದ್ದಾರೆ. ಅಂಡರ್ 13 ಟೂರ್ನಮೆಂಟ್ ನಲ್ಲಿ ರಾಹುಲ್ ಒಂದರ ಹಿಂದೊಂದು ದ್ವಿಶತಕ ಸಿಡಿಸಿದ್ದರು. ಅದೇ ಸಮಯಕ್ಕೆ ಅಲ್ಲಿ ದ್ರಾವಿಡ್ ಪ್ರಾಕ್ಟೀಸ್ ಮಾಡುತ್ತಿದ್ದರು. ದ್ರಾವಿಡ್ ತಯಾರಾಗುತ್ತಿದ್ದಾಗ ಬೌಂಡರಿ ಬಳಿ ಕುಳಿತು ಅವರು ಆಡುವುದನ್ನು ನೋಡುವಂತೆ ಕೆಎಲ್ ಗೆ ಹೇಳಿದ್ದೆ. ಒಂದು ವಾರ ರಾಹುಲ್ ಹೀಗೇ ದ್ರಾವಿಡ್ ಪ್ರಾಕ್ಟೀಸ್ ಮಾಡುವುದನ್ನು ನೋಡುತ್ತಿದ್ದರು.

ಇದಾದ ಬಳಿಕ ದ್ರಾವಿಡ್ ನನ್ನ ಬಳಿ ಬಂದು ಈ ಹುಡುಗ ದ್ವಿಶತಕ ಸಿಡಿಸಿದ್ದನ್ನು ನಾನು ನೋಡಿದ್ದೇನೆ. ಆಗ ರಾಹುಲ್ ಬಳಿ ಮಾತನಾಡುವಂತೆ ದ್ರಾವಿಡ್ ರಲ್ಲಿ ವಿನಂತಿಸಿದ್ದೆ. ಕೆಎಲ್ ಬಳಿ ಮಾತನಾಡಿದ ಬಳಿಕ ದ್ರಾವಿಡ್ ನನ್ನ ಬಳಿ ಬಂದು ಈ ಹುಡುಗನಿಗೆ ಉತ್ತಮ ಭವಿಷ್ಯವಿದೆ. ಈತನನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ನನ್ನ ಬಳಿ ಹೇಳಿದ್ದರು ಎಂದು ಜಯರಾಜ್ ಮೆಲುಕು ಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ