ಟೀಂ ಇಂಡಿಯಾ ಆಟಗಾರರ ಐಪಿಎಲ್ ಓಟಕ್ಕೆ ಬ್ರೇಕ್ ಹಾಕಲು ಕೋಚ್ ರವಿಶಾಸ್ತ್ರಿ ಪ್ಲ್ಯಾನ್?!
ಹೀಗಾಗಿ ವಿಶೇಷವಾಗಿ ವೇಗಿಗಳು ಐಪಿಎಲ್ ನಲ್ಲಿ ಪೂರ್ಣಪ್ರಮಾಣದಲ್ಲಿ ಆಡದೇ ಇದ್ದರೆ ಒಳ್ಳೆಯದು ಎಂದು ಕೋಚ್ ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಆಯಾ ಫ್ರಾಂಚೈಸಿಗಳು ಮತ್ತು ತಂಡದ ನಾಯಕರಲ್ಲೂ ಮಾತುಕತೆ ನಡೆಸಲು ಶಾಸ್ತ್ರಿ ಚಿಂತನೆ ನಡೆಸಿದ್ದಾರೆ. ವಿಶ್ವಕಪ್ ಗೂ ಮೊದಲು ವೇಗಿಗಳಿಗೆ ಸಾಕಷ್ಟು ವಿಶ್ರಾಂತಿ ನೀಡುವ ಉದ್ದೇಶದಿಂದ ಕೋಚ್ ಈ ಕ್ರಮಕ್ಕೆ ಮುಂದಾಗಿದ್ದಾರೆ. ಈ ಹಿಂದೆ ನಾಯಕ ವಿರಾಟ್ ಕೊಹ್ಲಿ ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು ಎನ್ನುವುದನ್ನು ನಾವು ಇಲ್ಲಿ ಸ್ಮರಿಸಬಹುದು.