ನಿಮ್ಮ ಫೇವರಿಟ್ ಕೋಚ್ ಗಂಗೂಲಿಯಾ? ರಿಕಿ ಪಾಂಟಿಂಗ್? ಎಂಬ ಪ್ರಶ್ನೆಗೆ ರಿಷಬ್ ಪಂತ್ ಉತ್ತರ ಕೇಳಿ ಬೇಸ್ತಾದ ಕಮೆಂಟೇಟರ್ ಗಳು!

ಮಂಗಳವಾರ, 23 ಏಪ್ರಿಲ್ 2019 (09:08 IST)
ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಈಗ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಮತ್ತು ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಕೋಚ್ ಗಳಾಗಿದ್ದಾರೆ.


ಇವರಿಬ್ಬರಲ್ಲಿ ನಿಮ್ಮ ಫೇವರಿಟ್ ಯಾರು ಎಂದು ಕೇಳಿದ್ದಕ್ಕೆ ಡೆಲ್ಲಿ ಆಟಗಾರ ರಿಷಬ್ ಪಂತ್ ನೀಡಿದ ಉತ್ತರ ಕೇಳಿ ಕಮೆಂಟೇಟರ್ ಗಳು ಬೇಸ್ತು ಬಿದ್ದಿದ್ದಾರೆ.

ಐಪಿಎಲ್  ಪಂದ್ಯದ ನಡುವೆ ರಿಷಬ್ ಗೆ ಇಂತಹದ್ದೊಂದು ಪ್ರಶ್ನೆ ಕೇಳಿದಾಗ ‘ಏನು ನೀವು ಏನು ಹೇಳಿದ್ರಿ? ನಂಗೆ ಸರಿಯಾಗಿ ಕೇಳಿಸ್ತಿಲ್ಲ. ಸ್ವಲ್ಪ ಕನೆಕ್ಷನ್ ಪ್ರಾಬ್ಲಂ ಇದೆ ಎನಿಸುತ್ತದೆ’ ಎಂದು ರಿಷಬ್ ಕಮೆಂಟೇಟರ್ ಗಳೇ ಬೇಸ್ತು ಬೀಳುವಂತೆ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ