ಬೇಬಿ ಸಿಟ್ಟರ್ ಆಗಲು ಹೇಳಿಕೊಟ್ಟ ಸೆಹ್ವಾಗ್ ಗೆ ಥ್ಯಾಂಕ್ಸ್ ಹೇಳಿದ ರಿಷಬ್ ಪಂತ್!

ಶುಕ್ರವಾರ, 15 ಫೆಬ್ರವರಿ 2019 (09:13 IST)
ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ವೇಳೆ ಎದುರಾಳಿ ನಾಯಕನಿಂದ ಬೇಬಿ ಸಿಟ್ಟರ್ ಆಗಲು ಲಾಯಕ್ಕು ಎಂದು ಕರೆಸಿಕೊಂಡ ಮೇಲೆ ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ ಇದನ್ನು ತಮಾಷೆಯಾಗಿಯೇ ತೆಗೆದುಕೊಂಡಿದ್ದಾರೆ.


ಈ ವಿಚಾರವಾಗಿ ರಿಷಬ್ ಆಗಾಗ ಸಹ ಕ್ರಿಕೆಟಿಗರಿಂದಲೂ ತಮಾಷೆಗೊಳಗಾಗುತ್ತಿದ್ದಾರೆ. ಆದರೆ ಇತ್ತೀಚೆಗೆ ಇದೇ ವಿಷಯವನ್ನಿಟ್ಟುಕೊಂಡು ಸ್ಟಾರ್ ಸ್ಪೋರ್ಟ್ಸ್ ಮಾಡಿದ ಜಾಹೀರಾತೊಂದರಲ್ಲಿ ಸೆಹ್ವಾಗ್ ಬೆಟರ್ ಬೇಬಿ ಸಿಟ್ಟರ್ ಆಗುವುದು ಹೇಗೆ ಎಂದು ಪಾಠ ಹೇಳಿಕೊಟ್ಟಿದ್ದಾರೆ.

ಸೆಹ್ವಾಗ್ ಈ ಜಾಹೀರಾತಿನಲ್ಲಿ ಆಸ್ಟ್ರೇಲಿಯಾ ಸಮವಸ್ತ್ರ ಧರಿಸಿದ ಮಕ್ಕಳನ್ನು ನೋಡಿಕೊಳ್ಳುವ ಆಯಾ ಆಗಿ ಕಾಣಿಸಿಕೊಂಡಿದ್ದಾರೆ. ವೀರೂ ಜಾಹೀರಾತು ನೋಡಿದ ಬಳಿಕ ಇದೀಗ ರಿಷಬ್ ಪಂತ್ ಪ್ರತಿಕ್ರಿಯಿಸಿದ್ದು, ‘ವೀರೂ ಪಾಜಿ ನನಗೆ ಕ್ರಿಕೆಟ್ ಮತ್ತು ಬೇಬಿ ಸಿಟ್ಟರ್ ಆಗಿ ಹೇಗೆ ಬೆಟರ್ ಆಗಿರಬಹುದು ಎಂದು ಹೇಳಿಕೊಟ್ಟಿದ್ದಾರೆ. ನಿಮ್ಮ ಸ್ಪೂರ್ತಿಗೆ ಯಾವತ್ತೂ ಧನ್ಯವಾದಗಳು’ ಎಂದು ರಿಷಬ್ ತಮಾಷೆಯಾಗಿ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ