ಧೋನಿ ಇಲ್ಲದ ವೇಳೆ ಈ ದಾಖಲೆ ಬುಟ್ಟಿಗೆ ಹಾಕಿಕೊಂಡ ರೋಹಿತ್ ಶರ್ಮಾ
ಸೋಮವಾರ, 11 ಮಾರ್ಚ್ 2019 (09:29 IST)
ಮೊಹಾಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮೊಹಾಲಿಯಲ್ಲಿ ನಡೆದ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಧೋನಿ ದಾಖಲೆಯೊಂದನ್ನು ಮುರಿದಿದ್ದಾರೆ.
ಧೋನಿ ಈ ಪಂದ್ಯದಲ್ಲಿ ಆಡಿರಲಿಲ್ಲ. ಈ ವೇಳೆ ಧೋನಿ ದಾಖಲೆ ಮುರಿದ ರೋಹಿತ್ ಶರ್ಮಾ ಏಕದಿನ ಪಂದ್ಯಗಳಲ್ಲಿ ಭಾರತದ ಪರ ಗರಿಷ್ಠ ಸಿಕ್ಸರ್ ಸಿಡಿಸಿದ ಕೀರ್ತಿಗೆ ಪಾತ್ರರಾದರು.
ನಿನ್ನೆಯ ಪಂದ್ಯದಲ್ಲಿ 92 ಎಸೆತಗಳಲ್ಲಿ 95 ರನ್ ಮಾಡಿದ ರೋಹಿತ್ 2 ಸಿಕ್ಸರ್ ಸಿಡಿಸಿದ್ದರು. ಇದರೊಂದಿಗೆ ಏಕದಿನ ಪಂದ್ಯಗಳಲ್ಲಿ ಅವರ ಸಿಕ್ಸರ್ ಗಳ ಸಂಖ್ಯೆ 218 ಕ್ಕೇರಿದೆ. ಧೋನಿ 217 ಸಿಕ್ಸರ್ ಸಿಡಿಸಿದ್ದರು.
ಇದಲ್ಲದೆ ತವರಿನಲ್ಲಿ 3000 ರನ್ ಪೂರ್ತಿ ಮಾಡಿದ ದಾಖಲೆಯನ್ನೂ ರೋಹಿತ್ ಮಾಡಿದರು. ಅಲ್ಲದೆ, ಶಿಖರ್ ಧವನ್ ಜತೆಗೆ ಆರಂಭಿಕರಾಗಿ ಭಾರತದ ಪರ ಎರಡನೇ ಗರಿಷ್ಠ ರನ್ ಗಳಿಸಿದ ದಾಖಲೆಗೂ ಭಾಜನರಾದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ