ವಿರಾಟ್ ಕೊಹ್ಲಿ ಪರ ಟೀಂ ಇಂಡಿಯಾ ಸೋಲಿಗೆ ನಿಜ ಕಾರಣ ಯಾರು ಗೊತ್ತಾ?!

ಸೋಮವಾರ, 11 ಮಾರ್ಚ್ 2019 (09:10 IST)
ಮೊಹಾಲಿ: ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿನ ಬಳಿಕ ನಾಯಕ ವಿರಾಟ್ ಕೊಹ್ಲಿ ಡಿಆರ್ ಎಸ್ ವ್ಯವಸ್ಥೆ ವಿರುದ್ಧ ಕಿಡಿ ಕಾರಿದ್ದಾರೆ.


ಆಸ್ಟ್ರೇಲಿಯಾ ಗೆಲುವಿನ ರೂವಾರಿಯಾಗಿದ್ದ ಆಸ್ಟೋನ್ ಟರ್ನರ್ 43 ಎಸೆತಗಳಲ್ಲಿ 84 ರನ್ ಬಾರಿಸಿದ್ದರು. ಆದರೆ ಟರ್ನರ್ ತಮ್ಮ ಇನಿಂಗ್ಸ್ ನ ಆರಂಭದಲ್ಲಿಯೇ ಡಿಆರ್ ಎಸ್ ನಿಂದಾಗಿ ಔಟ್ ಆಗುವುದರಿಂದ ಬಚಾವ್ ಆಗಿದ್ದರು. ಸ್ನಿಕೋ ಮೀಟರ್ ನಲ್ಲಿ ಬಾಲ್ ಕೊಂಚ ಬ್ಯಾಟ್ ಗೆ ಒರೆಸಿರುವುದು ತೋರಿಸಿದರೂ ಡಿಆರ್ ಎಸ್ ಪಡೆದ ಭಾರತದ ಪರವಾಗಿ ಔಟ್ ತೀರ್ಪು ಬರಲಿಲ್ಲ. ಇದರಿಂದ ಟರ್ನರ್ ಪಂದ್ಯವನ್ನೇ ತಮ್ಮ ತಂಡದ ಕಡೆಗೆ ಟರ್ನ್ ಮಾಡಿದರು.

ಇದು ಕೊಹ್ಲಿಯ ಸಿಟ್ಟಿಗೆ ಕಾರಣವಾಗಿದೆ. ‘ಪ್ರತೀ ಪಂದ್ಯದಲ್ಲೂ ಡಿಆರ್ ಎಸ್ ನ ಅನಿಶ್ಚಿತತೆ ಬಗ್ಗೆ ಚರ್ಚೆ ಮಾಡುವಂತಾಗಿದೆ’ ಎಂದು ಡಿಆರ್ ಎಸ್ ವ್ಯವಸ್ಥೆ ಬಗ್ಗೆ ಕೊಹ್ಲಿ ಪಂದ್ಯದ ಬಳಿಕ ಕಿಡಿ ಕಾರಿದ್ದಾರೆ. ಅಷ್ಟೇ ಅಲ್ಲ, ಕೆಲವು ಮಿಸ್ ಫೀಲ್ಡ್, ರಾತ್ರಿ ವೇಳೆ ಬಾಲ್ ಒದ್ದೆಯಾಗಿ ಸರಿಯಾಗಿ ಬಾಲ್ ಮಾಡಲಾಗದೇ ಇದ್ದಿದ್ದೇ ಈ ಸೋಲಿಗೆ ಕಾರಣವಾಯಿತು ಎಂದು ಕೊಹ್ಲಿ ಹಳಿದುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ