ಈ ದಿಗ್ಗಜರ ದಾಖಲೆ ಮುರಿದ ಶಿಖರ್ ಧವನ್-ರೋಹಿತ್ ಶರ್ಮಾ

ಭಾನುವಾರ, 27 ಜನವರಿ 2019 (09:00 IST)
ಬೇ ಓವಲ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕರಾದ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ದಿಗ್ಗಜರ ದಾಖಲೆಯೊಂದನ್ನು ಹಿಂದಿಕ್ಕಿದ್ದಾರೆ.


ಟೀಂ ಇಂಡಿಯಾ ಪರ ಆರಂಭಿಕರಾಗಿ ಸಚಿನ್ ತೆಂಡುಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಮಾಡಿದ್ದ ಅತೀ ಹೆಚ್ಚು ಶತಕದ ಜತೆಯಾಟವನ್ನು ಹಿಂದಿಕ್ಕಿ ಧವನ್-ರೋಹಿತ್ ಜೋಡಿ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ.

ಈ ಜೋಡಿ  ಒಟ್ಟು 14 ಬಾರಿ ಶತಕದ ಜತೆಯಾಟವಾಡಿದ ದಾಖಲೆ ಮಾಡಿತು. ಇದಕ್ಕೂ ಮೊದಲು ಸೆಹ್ವಾಗ್-ಸಚಿನ್ ಜೋಡಿ 13 ಬಾರಿ ಶತಕದ ಜತೆಯಾಟವಾಡಿದ್ದರು. ಹಾಗಿದ್ದರೂ ಪಟ್ಟಿಯಲ್ಲಿ ಮೊದಲ ಸ್ಥಾನ ಸಚಿನ್ ಮತ್ತು ಗಂಗೂಲಿ ಹೆಸರಿನಲ್ಲಿದ್ದು, ಇವರು ಒಟ್ಟು 26 ಬಾರಿ ಶತಕದ ಜತೆಯಾಟವಾಡಿದ್ದಾರೆ. ಎರಡನೇ ಸ್ಥಾನ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಹೆಸರಿನಲ್ಲಿದೆ. ಈ ಜೋಡಿ ಒಟ್ಟು 15 ಬಾರಿ ಶತಕದ ಜತೆಯಾಟವಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ