ವಿರಾಟ್ ಕೊಹ್ಲಿ ಬಳಿಕ ಪತ್ನಿ ಅನುಷ್ಕಾ ಶರ್ಮಾ ಮೇಲೂ ಮುನಿಸು ತೋರಿದ ರೋಹಿತ್ ಶರ್ಮಾ?!

ಶುಕ್ರವಾರ, 26 ಜುಲೈ 2019 (09:33 IST)
ಮುಂಬೈ: ಒಂದೆಡೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬ ಸುದ್ದಿ ಹಬ್ಬಿದರೆ ಇನ್ನೊಂದೆಡೆ ಅವರ ನಡುವೆ ಹಾಗೇನೂ ಇಲ್ಲ ಎನ್ನುವವರೂ ಇದ್ದಾರೆ.


ಆದರೆ ಆಂಗ್ಲ ಮಾಧ್ಯಮವೊಂದರ ವರದಿ ನೋಡಿದರೆ ಈ ಮನಸ್ತಾಪ ನಿಜವೇನೋ ಅನಿಸುತ್ತದೆ. ಕೆಲವು ದಿನಗಳ ಹಿಂದೆ ರೋಹಿತ್ ಶರ್ಮಾ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ವಿರಾಟ್ ಕೊಹ್ಲಿಯನ್ನು ಅನ್ ಫಾಲೋ ಮಾಡಿದ್ದರು.

ಆವಾಗಿನಿಂದ ಇವರ ಮಧ್ಯೆ ಮುನಿಸು ಇರಬಹುದು ಎಂಬ ಊಹಾಪೋಹ ಶುರುವಾಗಿತ್ತು. ಇದೀಗ ರೋಹಿತ್ ವಿರಾಟ್ ಪತ್ನಿ, ನಟಿ ಅನುಷ್ಕಾ ಶರ್ಮಾರನ್ನೂ ಅನ್ ಫಾಲೋ ಮಾಡಿದ್ದಾರೆಂಬ ವರದಿಯಾಗಿದೆ. ಈ ಮೂಲಕ ಇವರಿಬ್ಬರ ನಡುವೆ ಸರಿಯಿಲ್ಲ ಎಂಬ ವಾದಕ್ಕೆ ಪುಷ್ಟಿ ನೀಡಿದೆ. ಆದರೆ ಕೊಹ್ಲಿ ಮಾತ್ರ ಈಗಲೂ ರೋಹಿತ್ ಮತ್ತು ಪತ್ನಿ ರಿತಿಕಾ ಪೇಜ್ ನ್ನು ಇನ್ ಸ್ಟಾಗ್ರಾಂನಲ್ಲಿ ಫಾಲೋ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ