ಉಪನಾಯಕತ್ವದ ಬಗ್ಗೆ ರೋಹಿತ್ ಶರ್ಮಾ ತಲೆನೇ ಕೆಡಿಸಿಕೊಳ್ಳಲ್ವಂತೆ
ಗುರುವಾರ, 17 ಆಗಸ್ಟ್ 2017 (12:15 IST)
ಕೊಲೊಂಬೊ: ಟೆಸ್ಟ್ ಸರಣಿಯಲ್ಲಿ ಆಡುವ ಬಳಗದಲ್ಲಿ ಅವಕಾಶ ಸಿಗದೇ ಬೆಂಚ್ ಕಾಯಿಸಿದ್ದ ರೋಹಿತ್ ಶರ್ಮಾಗೆ ಏಕದಿನ ಸರಣಿಗೆ ಉಪನಾಯಕನಾಗುವ ಅವಕಾಶ ಸಿಕ್ಕಿದೆ.
ಇದೇ ಅಲ್ವೇ ಅದೃಷ್ಟ ಎಂದರೆ? ಈ ಬಗ್ಗೆ ಸುದ್ದಿಗಾರರು ರೋಹಿತ್ ಶರ್ಮಾ ಅವರನ್ನು ಕೇಳಿದಾಗ, ನಾನು ಉಪನಾಯಕತ್ವದ ಬಗ್ಗೆಯಾಗಲೀ, ಟೆಸ್ಟ್ ಸರಣಿಯಲ್ಲಿ ಆಡಲು ಅವಕಾಶ ಸಿಕ್ಕದ ಬಗ್ಗೆಯಾಗಲೀ ಚಿಂತೆ ಮಾಡುತ್ತಿಲ್ಲ ಎಂದಿದ್ದಾರೆ.
ನನ್ನ ಗಮನವೇನಿದ್ದರೂ ಏಕದಿನ ಸರಣಿ ಮೇಲೆ ಇರುತ್ತದೆ. ಉಪನಾಯಕನಾಗುವುದು ನಿಜಕ್ಕೂ ದೊಡ್ಡ ಗೌರವ. ಇದು ನನಗೆ ಸಿಕ್ಕಿದ ಅದ್ಭುತ ಅವಕಾಶ. ಹಾಗಂತ ಅದರ ಬಗ್ಗೆ ಹೆಚ್ಚು ಚಿಂತೆ ಮಾಡುತ್ತಿಲ್ಲ ಎಂದಿದ್ದಾರೆ.