ಸದಾ ರಂಗು ರಂಗಿನ ಟ್ವೀಟ್ ಮಾಡುತ್ತಾ, ಸಿಕ್ಕ ಸಿಕ್ಕವರ ಕಾಲೆಳೆಯುವ ಸ್ಪೋಟಕ ಬ್ಯಾಟ್ಸಮನ್ ವೀರೇಂದ್ರ ಸೆಹ್ವಾಗ್ ಮೊನ್ನೆ ಕ್ರಿಕೆಟ್ ದೇವರು ಸಚಿನ್ ಕಾಲೆಳೆಯಲು ಹೋಗಿ ಮುಖಭಂಗಕ್ಕೀಡಾಗಿದ್ದಾರೆ.
ಮಾಸ್ಟರ್ಸ್‌ಗಳ ನಡುವೆ ಟ್ವಿಟರ್‌ನಲ್ಲಿ ಕಿತ್ತಾಟ ನಡೆದಿದ್ದು ತಾವೇ ತೋಡಿದ ಹಳ್ಳದಲ್ಲಿ ಬಿದ್ದ ಸೆಹ್ವಾಗ್ ನಿರುತ್ತರರಾಗಿ ಸುಮ್ಮನಾಗಿದ್ದು ಕಂಡು ಬಂತು.
ಅಷ್ಟಕ್ಕೂ ಇಬ್ಬರ ನಡುವೆ ಕಿಡಿ ಹೊತ್ತಿಕೊಂಡಿದ್ದಾದರೂ ಏಕೆ? ಮೈದಾನದಲ್ಲಿ ಜತೆಯಾಗಿ ಬ್ಯಾಟ್ ಬೀಸುತ್ತ ಎದುರಾಳಿಗಳ ಬೆವರಿಳಿಸುತ್ತಿದ್ದ ಅವರಿಬ್ಬರಲ್ಲಿ ನಡೆದಿದ್ದಾದರೂ ಏನು?
ಮೊನ್ನೆ ನ್ಯೂಜಿಲೆಂಡ್ ವಿರುದ್ಧದ ಎರಡನೆಯ ಟೆಸ್ಟ್‌ನ್ನು ಗೆದ್ದುಕೊಂಡ ಭಾರತ ಟೆಸ್ಟ್ ವಿಭಾಗದಲ್ಲಿ ಅಗ್ರ ಸ್ಥಾನಕ್ಕೇರಿದ ವಿಚಾರದಲ್ಲಿ
ಕೊಹ್ಲಿ ಪಡೆಯನ್ನು ಅಭಿನಂದಿಸಿ ಸಚಿನ್ ಟ್ವೀಟ್ ಮಾಡಿದ್ದರು.
ಟೆಸ್ಟ್ ವಿಭಾಗದಲ್ಲಿ ಮೊದಲ ಸ್ಥಾನವನ್ನು ಮರಳಿ ಗಳಿಸಿದ ಕೊಹ್ಲಿ ಬಳಗದ ಅದ್ಭುತ ಸಾಧನೆಗೆ ಅಭಿನಂದಿಸುವೆ ಎಂದು ಸಚಿನ್ ಟ್ವೀಟ್ ಮಾಡಿದ್ದರು.
ಸಚಿನ್ ಬೆನ್ನು ಚಪ್ಪರಿಸುತ್ತಿದ್ದಾರೆಂದರೆ ಆ ಮಾತೇ ಬೇರೆಯಾಗಿರುತ್ತದೆ. ಹೀಗಾಗಿ ಪಂದ್ಯದ ವೀಕ್ಷಕ ವಿವರಣೆಗಾರರಾಗಿದ್ದ ಸೆಹ್ವಾಗ್
ಸಚಿನ್ ಪ್ರೋತ್ಸಾಹಕ್ಕೆ ತಾವು ಅರ್ಹರು ಎಂದು ಭಾವಿಸಿರಬೇಕು.
ಓ ದೇವರೇ, ಆಗಾಗ ವೀಕ್ಷಕ ವಿವರಣೆಗಾರರಿಗೂ ಪ್ರೋತ್ಸಾಹ ನೀಡುತ್ತಿರಿ, ಸ್ವಲ್ಪ ಸ್ಪೂರ್ತಿ ಸಿಗತ್ತೆ ಎಂದು ಸೆಹ್ವಾಗ್ ಸಚಿನ್ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ.
ತನ್ನ ಮಾಜಿ ಆರಂಭಿಕ ಬ್ಯಾಟಿಂಗ್ ಪಾಲುದಾರ ಕಾಲೆಳೆದಾಗ ಸಚಿನ್ ಸುಮ್ಮನಾಗಲಿಲ್ಲ, ನೀವು ಹೇಳಿದ ಹಾಗೆ ಮಾಡೋಣ, 'ಜಿಯೋ ಮೇಲೆ ಲಾಲ್ ತಥಾಸ್ತು', ಎಂದ ಸಚಿನ್ ರೀಟ್ವೀಟ್ ಮಾಡಿದ್ದಾರೆ.
ಈ ಜಿಯೋನಿಂದ ಇಬ್ಬರ ನಡುವೆ ಮನಸ್ತಾಪ ಸುರುವಾಗಿದೆ.
ಆಶೀರ್ವಾದ ಮಾಡೋದ್ರಲ್ಲೂ ದೇವರು ತಮ್ಮ ಐಪಿಎಲ್ ತಂಡದ ಮಾಲೀಕರ ಬ್ರ್ಯಾಂಡ್ ಬಗ್ಗೆ ಉಲ್ಲೇಖಿಸಲು ಮರೆಯುವುದಿಲ್ಲ. ನಿಜಕ್ಕೂ ನೀವು ಜಗತ್ತನ್ನು ಅಲ್ಲಾಡಿಸಿ ಬಿಡುತ್ತಿರಿ ದೇವರೆ ಎಂದು ಸೆಹ್ವಾಗ್ ಸಚಿನ್ ಕಾಲೆಳೆದಿದ್ದಾರೆ.
ತಮ್ಮನ್ನು ಅಣಕಿಸಿದ ಸೆಹ್ವಾಗ್‌ಗೆ ಸಚಿನ ಉತ್ತರ ನೀಡದಿರಲಿಲ್ಲ. ನಾನು ಬರೆದಿದ್ದು ಹೀಗೆ ನೀವು ಅರ್ಥೈಸಿಕೊಂಡಿದ್ದು ಹಾಗೆ. ಅದೆಲ್ಲ ಅವರರವರ ಚಿಂತನೆಗೆ ಸಂಬಂಧಿಸಿರುತ್ತದೆ. ನಿಮ್ಮ ಚಿಂತನೆ ಬೇರೆ, ನನ್ನ ಸ್ಪೆಲ್ಲಿಂಗ್ ಬೇರೆ ಎಂದು ಸಚಿನ್ ಸೆಹ್ವಾಗ್‌ಗೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ.
ಸಚಿನ್ ಅವರ ಈ ಉತ್ತರದಿಂದ ಕಂಗಾಲಾದ ಸೆಹ್ವಾಗ್‌ಗೆ ತಮ್ಮ ತಪ್ಪಿನ ಅರಿವಾಗಿತ್ತು. ಹೀಗಾಗಿ ಅವರು ಮರುಮಾತಿಲ್ಲದೇ ಸುಮ್ಮನಾಗಿ ಬಿಟ್ಟರು.
ಟ್ವೀಟ್ ಮೂಲಕ ಯಾರನ್ನು ಬೇಕಾದರೂ ಕಾಲೆಳೆಯುತ್ತಿದ್ದ ಸೆಹ್ವಾಗ್‌ಗೆ ಪದಬಳಕೆ ಬಗ್ಗೆ ಸಚಿನ್ ರಿಂದ ಉತ್ತಮ ಪಾಠವೇ ದೊರತಂತಾಯಿತು.
ಇಬ್ಬರು ಮಾಸ್ಟರ್ ಬ್ಲಾಸ್ಟರ್‌ಗಳ ಈ ಮಾತಿನ ಚಕಮಕಿ ಟ್ವೀಟಿಗರಿಗೆ ಭಾರಿ ಮಜಾ ನೀಡಿದ್ದಂತೂ ಸತ್ಯ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ