ಟೀಂ ಇಂಡಿಯಾ ಕ್ರಿಕೆಟಿಗರಿಗೆ ಈಕೆಯಿಂದ ಪಾಠ ಮಾಡಿಸುವ ಬಯಕೆ ಶಾರುಖ್ ಖಾನ್ ಗೆ!
ಆಕೆ ಒಂದು ದಿನದ ಮಟ್ಟಿಗಾದರೂ ಪುರುಷರ ತಂಡಕ್ಕೆ ಕೋಚ್ ಆಗುವುದನ್ನು ನೋಡಲು ಬಯಸುತ್ತೇನೆ ಎಂದು ಶಾರುಖ್ ಖಾನ್ ಸ್ಟಾರ್ ಪ್ಲಸ್ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ. ಮಿಥಾಲಿ ಕೂಡಾ ಇದಕ್ಕೆ ಸಕಾರಾತ್ಮಕವಾಗಿ ಉತ್ತರ ಕೊಟ್ಟಿದ್ದು, ‘ನಾನು ಯಾವತ್ತೂ ನನ್ನ ಗರಿಷ್ಠ ಸಾಮರ್ಥ್ಯ ಪ್ರದರ್ಶಿಸಲು ಬಯಸುತ್ತೇನೆ’ ಎಂದಿದ್ದಾರೆ. ಎಲ್ಲಾ ರಂಗದಲ್ಲೂ ಮಹಿಳೆಯರು ಪುರುಷರ ಸರಿ ಸಮನಾಗಿರುವಾಗ ಕ್ರಿಕೆಟ್ ವಿಷಯದಲ್ಲೂ ಆ ದಿನ ಬಹಳ ದೂರವಿರಲಿಕ್ಕಿಲ್ಲ ಎಂದು ಆಶಿಸೋಣ.