ಅಭಿಮಾನಿಗಳೆಲ್ಲಾ ಗಾಯದ ಬಗ್ಗೆ ಚಿಂತೆ ಮಾಡ್ತಿದ್ದರೆ ಶಿಖರ್ ಧವನ್ ಮಾತ್ರ ಸಹ ಆಟಗಾರರೊಂದಿಗೆ ಮಾಡಿದ್ದೇನು ಗೊತ್ತಾ?

ಬುಧವಾರ, 12 ಜೂನ್ 2019 (09:51 IST)
ಲಂಡನ್: ಹೆಬ್ಬರಳಿನ ಮುರಿತಕ್ಕೊಳಗಾಗಿ ವಿಶ್ವಕಪ್ ನ ಮುಂದಿನ ಮೂರು ವಾರಗಳ ಪಂದ್ಯಗಳಿಗೆ ಅಲಭ್ಯರಾಗಿರುವ ಶಿಖರ್ ಧವನ್ ಸದ್ಯಕ್ಕೆ ತಂಡದೊಂದಿಗೇ ಇದ್ದಾರೆ.


ಇನ್ ಫಾರ್ಮ್ ಬ್ಯಾಟ್ಸ್ ಮನ್ ಶಿಖರ್ ಧವನ್ ಗಾಯದ ಬಗ್ಗೆ ಅಭಿಮಾನಿಗಳು ಚಿಂತೆಯಲ್ಲಿದ್ದರೆ, ಧವನ್ ಮಾತ್ರ ತಮ್ಮ ತಂಡದ ಸಹ ಆಟಗಾರರೊಂದಿಗೆ ಸಲ್ಮಾನ್ ಖಾನ್ ಅಭಿನಯದ ಭಾರತ್ ಸಿನಿಮಾ ನೋಡಿ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ.

ಧವನ್ ಜತೆಗೆ ಧೋನಿ, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಕೇದಾರ್ ಜಾಧವ್ ಕೂಡಾ ಸಿನಿಮಾಗೆ ತೆರಳಿದ್ದಾರೆ. ಬಳಿಕ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ