ಭಾರತ ತಂಡದ ರನ್ ಗತಿಗೂ ಜಿಎಸ್ ಟಿ ಇಫೆಕ್ಟ್?!

ಶುಕ್ರವಾರ, 22 ಸೆಪ್ಟಂಬರ್ 2017 (08:58 IST)
ಕೋಲ್ಕೊತ್ತಾ: ಆಸ್ಟ್ರೇಲಿಯಾ ವಿರುದ್ಧ ದ್ವಿತೀಯ ಏಕದಿನ ಪಂದ್ಯ ಆಡಲಿಳಿದ ಭಾರತ ತಂಡ ನಾಯಕ ವಿರಾಟ್ ಕೊಹ್ಲಿ ಔಟಾಗುತ್ತಿದ್ದಂತೇ ತಂಡದ ರನ್ ಗತಿ ಇದ್ದಕ್ಕಿದ್ದಂತೆ ಪಾತಾಳಕ್ಕೆ ಕುಸಿಯಿತು. ಇದೆಲ್ಲಾ ಜಿಎಸ್ ಟಿ ಇಫೆಕ್ಟ್ ಅಂತೆ!


ಹಾಗಂತ ಕಾಮೆಂಟರಿ ಮಾಡುತ್ತಿದ್ದ ವೀರೇಂದ್ರ ಸೆಹ್ವಾಗ್ ತಮಾಷೆಯಾಗಿ ಹೇಳಿಕೊಂಡಿದ್ದಾರೆ. ಕೊಹ್ಲಿ ಔಟಾದ ಬಳಿಕ, ಅವರ ಬೆನ್ನಲ್ಲೇ ಧೋನಿಯೂ ಔಟಾಗಿ ಪೆವಿಲಿಯನ್ ಸೇರಿಕೊಂಡ ಮೇಲೆ ಭಾರತದ ರನ್ ಗತಿ ಮಂಕಾಯಿತು. ಈ ಸಂದರ್ಭವನ್ನು ಸೆಹ್ವಾಗ್ ವಿಡಂಬನಾತ್ಮಕವಾಗಿ ಜಿಎಸ್ ಟಿ ಗೆ ಹೋಲಿಸಿದ್ದಾರೆ.

ಜಿಎಸ್ ಟಿ ತೆರಿಗೆಯಂತೇ ರನ್ ಗತಿಯೂ ತಳಮಟ್ಟಕ್ಕೆ ತಲುಪಿತು ಎಂದ ಸೆಹ್ವಾಗ್ ನಂತರ ಇದಕ್ಕೆಲ್ಲಾ ಪದೇ ಪದೇ ವಿಕೆಟ್ ಕಳೆದುಕೊಳ್ಳುತ್ತಿರುವುದು ಕಾರಣ ಎಂದು ತಮ್ಮನ್ನು ತಿದ್ದಿಕೊಂಡರು.

ಇದನ್ನೂ ಓದಿ…  ಈಡನ್ ಗಾರ್ಡನ್ ಬಿಸಲಿಗೆ ಕ್ರಿಕೆಟಿಗರು ಸುಸ್ತೋ ಸುಸ್ತು!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ