ಶತಕ ಗಳಿಸಿ ಪತ್ನಿ ಕೊಟ್ಟ ಉಂಗುರಕ್ಕೆ ಕಿಸ್ ಮಾಡಿದ ಕೊಹ್ಲಿ ಬಗ್ಗೆ ಟ್ವಿಟರಿಗರು ಹೇಳಿದ್ದು ಹೀಗೆ!

ಮಂಗಳವಾರ, 16 ಜನವರಿ 2018 (09:51 IST)
ಸೆಂಚೂರಿಯನ್: ದ.ಆಫ್ರಿಕಾ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೂರನೇ ದಿನ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶತಕ ಗಳಿಸಿದ ನಂತರ ಮದುವೆ ಉಂಗುರಕ್ಕೆ ಕಿಸ್ ಮಾಡಿದ್ದು ಭಾರೀ ವೈರಲ್ ಆಗಿದೆ.

ವಿರಾಟ್ ಮದುವೆಯ ಉಂಗುರವನ್ನು ಕುತ್ತಿಗೆಯ ಸರಕ್ಕೆ ನೇತುಹಾಕಿಕೊಂಡಿದ್ದಾರೆ. ಈ ಉಂಗುರಕ್ಕೆ ಕೊಹ್ಲಿ ಕಿಸ್ ಮಾಡುತ್ತಿರುವ ಫೋಟೋ ನೋಡಿ ಟ್ವಿಟರಿಗರು ಪ್ರತಿಕ್ರಿಯಿಸಿದ್ದಾರೆ.

ಕೊಹ್ಲಿ 150 ಪ್ಲಸ್ ರನ್ ಹೊಡೆದ ಮೇಲೆ ಮದುವೆ ಉಂಗುರಕ್ಕೆ ಕಿಸ್ ಮಾಡಿ ಸಂಬಂಧದ ಮಹತ್ವವನ್ನು ಎಲ್ಲರಿಗೂ ತಿಳಿಸಿಕೊಟ್ಟರು. ಅವರ ಬಗ್ಗೆ ಹೆಮ್ಮೆಯಾಗುತ್ತಿದೆ ಎಂದು ಕೆಲವರು ಹೇಳಿದರೆ ಇನ್ನೊಬ್ಬರು ಕೊಹ್ಲಿ ರಿಂಗ್ ಗೆ ಕಿಸ್ ಮಾಡಿದ್ದು ನೋಡಿ ಕಣ್ಣೀರು ಬಂತು ಎಂದಿದ್ದಾರೆ. ಹಲವರು ಕೊಹ್ಲಿಯ ಈ ನಡೆಯನ್ನು ಇಷ್ಟಪಟ್ಟು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ