ಐಸಿಸಿ ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿ ಮುಂದುವರಿದ ವಿರಾಟ್ ಕೊಹ್ಲಿ

ಬುಧವಾರ, 25 ಡಿಸೆಂಬರ್ 2019 (08:00 IST)
ದುಬೈ: ಐಸಿಸಿ ಇತ್ತೀಚೆಗಿನ ಟೆಸ್ಟ್ ಶ್ರೇಯಾಂಕ ಪಟ್ಟಿ ಬಿಡುಗಡೆ ಮಾಡಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಂ.1 ಸ್ಥಾನದಲ್ಲಿ ಮುಂದುವರಿದಿದ್ದಾರೆ.


ಒಟ್ಟು 928 ಅಂಕಗಳೊಂದಿಗೆ ಕೊಹ್ಲಿ ನಂ.1 ಸ್ಥಾನದಲ್ಲಿ ಮುಂದುವರಿದಿದ್ದರೆ, ಎರಡನೇ ಸ್ಥಾನದಲ್ಲಿರುವ ಸ್ಟೀವ್ ಸ್ಮಿತ್ 17 ಅಂಕಗಳಿಂದ ಹಿನ್ನಡೆಯಲ್ಲಿದ್ದಾರೆ. ಈ ತಿಂಗಳ ಆರಂಭದಲ್ಲಿ ಕೊಹ್ಲಿ ಸ್ಮಿತ್ ರಿಂದ ನಂ.1 ಪಟ್ಟ ಪಡೆದುಕೊಂಡಿದ್ದರು.

ಉಳಿದಂತೆ ಚೇತೇಶ್ವರ ಪೂಜಾರ ನಾಲ್ಕನೇ ಸ್ಥಾನದಲ್ಲಿದ್ದರೆ, ಟೀಂ ಇಂಡಿಯಾ ಉಪನಾಯಕ ಅಜಿಂಕ್ಯಾ ರೆಹಾನೆ ಒಂದು ಸ್ಥಾನ ಹಿನ್ನಡೆ ಅನುಭವಿಸಿದ್ದು, ಏಳನೇ ಸ್ಥಾನಕ್ಕೆ ಕುಸಿದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ