ಬ್ಯಾಟಿಂಗ್ ವೈಫಲ್ಯಕ್ಕೆ ತಕ್ಕ ಬೆಲೆ ತೆತ್ತ ವಿರಾಟ್ ಕೊಹ್ಲಿ

ಮಂಗಳವಾರ, 14 ಮಾರ್ಚ್ 2017 (09:15 IST)
ದುಬೈ: ಆಸ್ಟ್ರೇಲಿಯಾ ಟೆಸ್ಟ್ ಸರಣಿ ಆರಂಭವಾದಾಗಿನಿಂದ ವಿರಾಟ್ ಕೊಹ್ಲಿ ಬ್ಯಾಟಿಂಗ್ ಯಾಕೋ ಕ್ಲಿಕ್ ಆಗಿಲ್ಲ. ಎರಡೂ ಪಂದ್ಯಗಳ ನಾಲ್ಕೂ ಇನಿಂಗ್ಸ್ ಗಳಲ್ಲಿ ಕಳಪೆ ಮೊತ್ತಕ್ಕೆ ಔಟಾದ ಕೊಹ್ಲಿ ಅದಕ್ಕೆ ತಕ್ಕ ಬೆಲೆ ತೆತ್ತಿದ್ದಾರೆ.

 
ಆಸ್ಟ್ರೇಲಿಯಾ ಸರಣಿ ಆರಂಭವಾಗುವುದಕ್ಕೆ ಮೊದಲು ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದರು. ದ್ವಿತೀಯ ಟೆಸ್ಟ್ ಮುಗಿದ ಮೇಲೆ ಮೂರನೇ ಸ್ಥಾನಕ್ಕೆ ಜಾರಿದ್ದರು. ಇದೀಗ ಬಿಡುಗಡೆಗೊಂಡ ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ.

ಆದರೆ ಭಾರತದ ವಿರುದ್ಧ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಆಸೀಸ್ ನಾಯಕ ಸ್ಟೀವ್ ಸ್ಮಿತ್ ದ್ವಿತೀಯ ಸ್ಥಾನಕ್ಕೇರಿದ್ದಾರೆ. ಇಂಗ್ಲೆಂಡ್ ನ ಜೋ ರೂಟ್ ಅಗ್ರ ಸ್ಥಾನಿಯಾಗಿದ್ದಾರೆ. ಚೇತೇಶ್ವರ ಪೂಜಾರ ಟಾಪ್ 10 ರೊಳಗೆ ಸ್ಥಾನ ಪಡೆದ ಇನ್ನೊಬ್ಬ ಭಾರತೀಯ ಬ್ಯಾಟ್ಸ್ ಮನ್. ಅವರು ಆರನೇ ಸ್ಥಾನದಲ್ಲಿದ್ದಾರೆ.

ಆದರೆ ಬೌಲರ್ ಗಳ ಪಟ್ಟಿಯಲ್ಲಿ ರವಿಚಂದ್ರನ್ ಅಶ್ವಿನ್  ಮತ್ತೊಮ್ಮೆ ಆಲ್ ರೌಂಡರ್ ಗಳ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ. ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಈ ಮೊದಲು ಅಗ್ರ ಸ್ಥಾನಿಯಾಗಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ