ಎಷ್ಟೇ ವಿಫಲರಾದರೂ ಶಿಖರ್ ಧವನ್ ಗೇ ಅವಕಾಶ ಸಿಗುತ್ತಿರುವುದರ ಹಿಂದಿನ ಕಾರಣ ಬಯಲು!

ಭಾನುವಾರ, 10 ಮಾರ್ಚ್ 2019 (09:08 IST)
ಮುಂಬೈ: ಟೀಂ ಇಂಡಿಯಾದಲ್ಲಿ ಆರಂಭಿಕ ಸ್ಥಾನಕ್ಕಾಗಿ ಭಾರೀ ಪೈಪೋಟಿಯಿದೆ. ಪದೇ ಪದೇ ವಿಫಲರಾಗುತ್ತಿದ್ದರೂ ಶಿಖರ್ ಧವನ್ ಗೆ ಸ್ಥಾನ ನೀಡುತ್ತಿರುವುದರ ಹಿಂದಿನ ಕಾರಣ ಬಯಲಾಗಿದೆ.


ಶಿಖರ್ ಧವನ್ ಬದಲು ಕೆಎಲ್ ರಾಹುಲ್ ಗೆ ಸ್ಥಾನ ನೀಡಿ, ಇಲ್ಲವೇ ರಿಷಬ್ ಪಂತ್ ಗೆ ಆರಂಭಿಕ ಸ್ಥಾನ ನೀಡಿ ಎಂದು ಅಭಿಮಾನಿಗಳು ಒತ್ತಾಯಿಸುತ್ತಲೇ ಇರುತ್ತಾರೆ. ಆದರೂ ಟೀ ಇಂಡಿಯಾ ಮ್ಯಾನೇಜ್ ಮೆಂಟ್ ಮಾತ್ರ ರೋಹಿತ್ ಶರ್ಮಾ ಜತೆಗೆ ಶಿಖರ್ ಧವನ್ ರನ್ನೇ ಆಡಿಸುತ್ತಿದೆ.

ಇದಕ್ಕೆ ಕಾರಣವೇನೆಂದು ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಬಹಿರಂಗಪಡಿಸಿದ್ದಾರೆ. ಧವನ್ ಕಳೆದ 14 ಇನಿಂಗ್ಸ್ ಗಳಲ್ಲಿ ವಿಫಲರಾಗಿದ್ದಾರೆ. ಹಾಗಿದ್ದರೂ ನಮಗೆ ಆರಂಭಿಕರಾಗಿ ಬಲಗೈ ಮತ್ತು ಎಡಗೈ ಕಾಂಬಿನೇಷನ್ ಬೇಕು. ರೋಹಿತ್ ಶರ್ಮಾ ಬಲಗೈ ಬ್ಯಾಟ್ಸ್ ಮನ್. ಧವನ್ ಎಡಗೈ ಬ್ಯಾಟ್ಸ್ ಮನ್. ಹೀಗಾಗಿ ಸಮತೋಲನ ಸಿಗುತ್ತದೆಂದು ಧವನ್ ಗೇ ಅವಕಾಶ ನೀಡಲಾಗುತ್ತಿದೆ ಎಂದು ಬಂಗಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ