ರಾಂಚಿ ಸೋಲಿನ ಬಳಿಕ ಬ್ಯಾಟಿಂಗ್ ಬಗ್ಗೆ ಸೀರಿಯಸ್ ಆದ ವಿರಾಟ್ ಕೊಹ್ಲಿ

ಭಾನುವಾರ, 10 ಮಾರ್ಚ್ 2019 (09:04 IST)
ರಾಂಚಿ: ಆಸ್ಟ್ರೇಲಿಯಾ ವಿರುದ್ಧ ರಾಂಚಿಯಲ್ಲಿ ನಡೆದ ಏಕದಿನ ಪಂದ್ಯದ ಸೋಲಿನ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ತಂಡದ ಬ್ಯಾಟಿಂಗ್ ವೈಫಲ್ಯದ ಬಗ್ಗೆ ಗಂಭೀರವಾಗಿ ಯೋಚನೆ ಮಾಡಲಾರಂಭಿಸಿದ್ದಾರೆ.


ಮುಂದಿನ ಎರಡು ಪಂದ್ಯಗಳಲ್ಲಿ ತಮ್ಮ ಗಮನ ತಂಡದ ಬ್ಯಾಟಿಂಗ್ ಸುಧಾರಣೆಯೇ ಆಗಿರುತ್ತದೆ ಎಂದು ಕೊಹ್ಲಿ ಪಂದ್ಯದ ನಂತರ ಹೇಳಿಕೊಂಡಿದ್ದಾರೆ.

ಈಗಾಗಲೇ ಟಿ20 ಸರಣಿಯನ್ನು ಬ್ಯಾಟಿಂಗ್ ವೈಫಲ್ಯದಿಂದಾಗಿಯೇ ಕೊಹ್ಲಿ ಪಡೆ ಕಳೆದುಕೊಂಡಿತ್ತು. ಇದೀಗ ಮತ್ತೆ ಏಕದಿನ ಸರಣಿಯಲ್ಲೂ ಬ್ಯಾಟ್ಸ್ ಮನ್ ಗಳು ರನ್ ಗಳಿಸಲು ಎಡವುತ್ತಿರುವುದು ಮುಂಬರುವ ವಿಶ್ವಕಪ್ ದೃಷ್ಟಿಯಿಂದ ಭಾರತಕ್ಕೆ ಚಿಂತೆಯ ವಿಷಯವಾಗಿದೆ. ಕೇವಲ 300 ರ ಗಡಿ ದಾಟಲು ಹೆಣಗಾಡುತ್ತಿರುವುದು ನಿಜಕ್ಕೂ ಯೋಚಿಸಬೇಕಾದ ವಿಚಾರವೇ.

ಅದರಲ್ಲೂ ವಿಶೇಷವಾಗಿ ಆರಂಭಿಕರು ಮತ್ತು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ಸ್ ಮನ್ ಗಳು ವಿಫಲರಾಗುತ್ತಿರುವುದು ತಂಡಕ್ಕೆ ದುಬಾರಿಯಾಗಿ ಪರಿಣಮಿಸಿದೆ. ಹೀಗಾಗಿ ಈ ಹುಳುಕುಗಳನ್ನು ತಕ್ಷಣವೇ ಸರಿಪಡಿಸುವ ಬಗ್ಗೆ ಕೆಲಸ ಮಾಡುತ್ತೇವೆ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ