ಸೆಲೂನ್ ಇಲ್ಲದೇ ಹೇರ್ ಕಟ್ ಮಾಡಲು ಸಮಸ್ಯೆಯಾಗುತ್ತಿದೆಯೇ? ಶುರುವಾಗಿದೆ ಹೇರ್ ಕಟ್ ಚಾಲೆಂಜ್

ಶನಿವಾರ, 11 ಏಪ್ರಿಲ್ 2020 (09:26 IST)
ಮುಂಬೈ: ಕೊರೋನಾ ಲಾಕ್ ಡೌನ್ ಯಾವೆಲ್ಲಾ ಸಮಸ್ಯೆ, ಪೀಕಲಾಟ ತಂದಿತ್ತಿದೆ ನೋಡಿ. ಸೆಲೂನ್ ಇಲ್ಲದ ಕಾರಣ ಹೇರ್ ಕಟ್ ಮಾಡಲಾಗದೇ ಕೂದಲು ಬೆಳೆಸಿಕೊಂಡು ಅದೆಷ್ಟೋ ಜನ ಪೀಕಲಾಟ ಅನುಭವಿಸುತ್ತಿದ್ದಾರೆ.


ಹೇಳಿ ಕೇಳಿ ಬೇಸಿಗೆ ಬೇರೆ. ಬೆವರು ಸುರಿಯುತ್ತಿರಬೇಕಾದರೆ ಸಮ್ಮರ್ ಕಟ್ ಮಾಡೋಣವೆಂದರೆ ಸೆಲೂನ್ ಇಲ್ಲ. ಹೀಗಿರುವವರಿಗೆ ಶುರುವಾಗಿದೆ ಹೇರ್ ಕಟ್ ಚಾಲೆಂಜ್.

ಯುವರಾಜ್ ಸಿಂಗ್, ಗೌತಮ್ ಗಂಭೀರ್ ಹೇರ್ ಕಟ್ ಚಾಲೆಂಜ್ ಶುರು ಮಾಡಿದ್ದಾರೆ. ಕೊರೋನಾ ವಿರುದ್ಧ ಹೋರಾಡುತ್ತಿರುವವರ ಗೌರವಾರ್ಥ ಸಾಮಾಜಿಕ ಜಾಲತಾಣದಲ್ಲಿ ಇಂತಹದ್ದೊಂದು ಅಭಿಯಾನ ಆರಂಭಿಸಿದ್ದಾರೆ. ಒಂದು ವೇಳೆ ನೀವೇ ಹೇರ್ ಕಟ್ ಮಾಡಿ ಸಮಾಧಾನವಾಗಿಲ್ಲವೆಂದಾದರೂ ಇದು ಚಾಲೆಂಜ್ ಎಂದು ಸಮಾಧಾನಪಟ್ಟುಕೊಳ್ಳಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ