ತನ್ನ ಸೀಟ್ ನಲ್ಲಿ ಕೂತಿದ್ದ ರೋಹಿತ್ ಶರ್ಮಾ ನೋಡಿ ಸಿಟ್ಟಾಗಿದ್ದ ಯುವರಾಜ್ ಸಿಂಗ್
ಹಿಂದೊಮ್ಮೆ ಮೊದಲೇ ಟೀಂ ಬಸ್ ಏರಿ ಬೇಕೆಂದೇ ಯುವರಾಜ್ ಸಿಂಗ್ ಸೀಟ್ ನಲ್ಲಿ ಕೂತಿದ್ದೆ. ನನಗೆ ಆರ್ ಪಿ ಸಿಂಗ್ ಇದು ಯುವರಾಜ್ ಸೀಟ್ ಎಂದು ಹೇಳಿದ್ದರೂ ಅವರ ಸೀಟ್ ನಲ್ಲೇ ಕೂತಿದ್ದೆ. ತಡವಾಗಿ ಬಸ್ ಒಳಗೆ ಬಂದ ಯುವರಾಜ್ ನನ್ನ ನೋಡಿ ಸಿಟ್ಟಿಗೆದ್ದರು. ಇದು ಯಾರ ಸೀಟ್ ಎಂದು ಗೊತ್ತಾ? ಎಂದು ಕೇಳಿದರು. ನಂತರ ಏಳು ಇದು ನನ್ನ ಸೀಟ್. ನೀನು ಬೇರೆ ಸೀಟ್ ನೋಡ್ಕೋ’ ಎಂದು ಎಬ್ಬಿಸಿದರು. ಹಾಗಿದ್ದರೂ ನಾವಿಬ್ಬರೂ ಈಗಲೂ ಉತ್ತಮ ಗೆಳೆಯರು ಎಂದು ರೋಹಿತ್ ಹೇಳಿಕೊಂಡಿದ್ದಾರೆ.