ಕೊನೆಗೂ ಭಾರತದ ಕೊರೋನಾ ಸಂಕಷ್ಟಕ್ಕೆ ಯುವರಾಜ್ ಸಿಂಗ್ ಭಾರೀ ದೇಣಿಗೆ

ಸೋಮವಾರ, 6 ಏಪ್ರಿಲ್ 2020 (10:23 IST)
ಮುಂಬೈ: ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ ಫೌಂಡೇಷನ್ ಗೆ ಕೊರೋನಾ ವಿರುದ್ಧದ ಹೋರಾಟಕ್ಕೆ ನೆರವಾಗಿ ಎಂದು ಕರೆ ನೀಡಿ ಟೀಕೆಗೊಳಗಾಗಿದ್ದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಈಗ ಭಾರತದಲ್ಲಿ ಪರಿಹಾರ ಕಾರ್ಯಕ್ಕೆ 50 ಲಕ್ಷ ರೂ. ದೇಣಿಗೆ ನೀಡಲು ನಿರ್ಧರಿಸಿದ್ದಾರೆ.


ಈ ಬಗ್ಗೆ ಟ್ವೀಟ್ ಮಾಡಿರುವ ಯುವರಾಜ್ ಸಿಂಗ್ ಪ್ರಧಾನಿ ಪರಿಹಾರ ನಿಧಿಗೆ 50 ಲಕ್ಷ ರೂ. ದೇಣಿಗೆ ನೀಡುವುದಾಗಿ ಹೇಳಿದ್ದಾರೆ. ಅಲ್ಲದೆ, ನೀವೂ ನಿಮ್ಮ ಕೈಲಾದ ಸಹಾಯ ಮಾಡಿ ಎಂದು ಕರೆ ನೀಡಿದ್ದಾರೆ. ನಿನ್ನೆ ರಾತ್ರಿ ಪ್ರಧಾನಿ ಕರೆ ಕೊಟ್ಟಿದ್ದ ದೀಪ ಹಚ್ಚುವ ಅಭಿಯಾನದಲ್ಲೂ ಯುವಿ ಪಾಲ್ಗೊಂಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ