ಬೆಂಗಳೂರು: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ನೀಡಿದ ಆಧಾರ್ ಕಾರ್ಡ್ ನ್ನು ಭಾರತೀಯ ನಾಗರಿಕರು ಕಾಲ ಕಾಲಕ್ಕೆ ಅಪ್ ಡೇಟ್ ಮತ್ತು ಬದಲಾಯಿಸುತ್ತಿರಬೇಕು. ಯಾವ ವಯಸ್ಸಿನವರೆಗೆ ಆಧಾರ್ ಅಪ್ ಡೇಟ್ ಮಾಡುತ್ತಿರಬೇಕು? ಇಲ್ಲಿದೆ ವಿವರ.
ಆಧಾರ್ ಕಾರ್ಡ್ ನಲ್ಲಿ ನಿಮ್ಮ ಫೋಟೋ ಬದಲಾಯಿಸಿಲು ಯುಐಡಿಎಐ ಯಾವುದೇ ಕಡ್ಡಾಯ ನಿಯಮ ಮಾಡಿಲ್ಲ. ಆದರೆ ಯುಐಡಿಎಐ ಪ್ರತೀ 10 ವರ್ಷಗಳಿಗೊಮ್ಮೆ ನಿಮ್ಮ ಫೋಟೋವನ್ನು ಬದಲಾಯಿಸುತ್ತಿರಲು ಅಥವಾ ಅಪ್ ಡೇಟ್ ಮಾಡಲು ಸಲಹೆ ನೀಡುತ್ತದೆ.
ಮಕ್ಕಳಾಗಿದ್ದಾಗ ಆಧಾರ್ ಮಾಡಿಸಿಕೊಂಡಿದ್ದರೆ ಮಗುವಿಗೆ 5 ವರ್ಷವಾದಾಗ ಒಮ್ಮೆ ಆಧಾರ್ ಫೋಟೋ ಬದಲಾಯಿಸಬೇಕು. ಬಳಿಕ 15 ವರ್ಷ ವಯಸ್ಸಿನ ಅಂತರದಲ್ಲಿ ಮತ್ತೊಮ್ಮೆ ಫೋಟೋ ಬದಲಾಯಿಸಿಕೊಳ್ಳಬೇಕು. ಯಾಕೆಂದರೆ ಈ ಹಂತದಲ್ಲಿ ಮಗುವಿನ ಮುಖ ಚಹರೆ ಬದಲಾಗುತ್ತಿರುತ್ತದೆ.
ಆಧಾರ್ ಫೋಟೋ ನವೀಕರಿಸುವುದು ಹೇಗೆ?
ಆಧಾರ್ ಫೋಟೋ ನವೀಕರಿಸಲು ನೀವು ನಿಮ್ಮ ಹತ್ತಿರದ ಆಧಾರ್ ನೋಂದಣಿ ಕೇಂದ್ರಕ್ಕೆ ಹೋಗಿ ಅಪ್ ಡೇಟ್ ಮಾಡಿಕೊಳ್ಳಬಹುದು. ಅಲ್ಲಿ ನೀಡುವ ಫಾರ್ಮ್ ಭರ್ತಿ ಮಾಡಿ ನಿಮ್ಮ ಬಯೋಮೆಟ್ರಿಕ್ ಮಾಹಿತಿ ನೀಡಬೇಕು. ಅಲ್ಲಿಯೇ ನಿಮ್ಮ ಪ್ರಸ್ತುತ ಫೋಟೋ ತೆಗೆದುಕೊಳ್ಳುತ್ತಾರೆ. ಆಧಾರ್ ಕಾರ್ಡ್ ನಲ್ಲಿ ಫೋಟೋ ಅಪ್ ಡೇಟ್ ಆಗಲು ಕೆಲವು ದಿನ ಬೇಕಾಗುತ್ತದೆ. ಇದಕ್ಕೆ 100 ರೂ. ಶುಲ್ಕ ವಿಧಿಸಲಾಗುತ್ತದೆ. ಒಂದು ವೇಳೆ ನೀವು ಆನ್ ಲೈನ್ ನಲ್ಲಿ ನವೀಕರಿಸಲು ಬಯಸಿದರೆ myaadhar.uidai.gov.in ಎಂಬ ವೆಬ್ ಸೈಟ್ ಗೆ ತೆರಳಿ ನಿಮ್ಮ ವಿವರಗಳನ್ನು ನೀಡಿ ಅಪ್ ಡೇಟ್ ಮಾಡಿಕೊಳ್ಳಬಹುದು.