ದೀಪಾವಳಿ ಹಾಸ್ಯಚಟಾಕಿ

ND
ದೀಪಾವಳಿ ತಿನ್ನಲಾಗುವುದಿಲ್ಲ!
ಗುಂಡ- ದೀಪಾವಳಿಗೂ ಪೊಂಗಲಿಗೂ ಇರುವ ವ್ಯತ್ಯಾಸವೇನು?
ರಂಗ- ದೀಪಾವಳಿಯಂದು ಪೊಂಗಲ್ ತಿನ್ನಬಹುದು, ಪೊಂಗಲ್‌ನಂದು ದೀಪಾವಳಿ ತಿನ್ನಲಾಗುತ್ತದಾ?


ಮುಗಿಯದ ಮಾಲೆ ಪಟಾಕಿ
(ಮಗ ಅಪ್ಪನಲ್ಲಿ)
ಮಗ- ಅಪ್ಪ ಪಟಾಕಿಗೂ, ಮಾಲೆ ಪಟಾಕಿಗೂ ಇರುವ ವ್ಯತ್ಯಾಸವೇನು?
ಅಪ್ಪ- (ವಿವರವಾಗಿ)ನೋಡು ಮಗೂ..ಹತ್ತಿರದ ಮನೆ ಆಂಟಿ ಇದ್ದಾರಲ್ಲ. ಅವರು ಪಟಾಕಿಯಂತೆ ಒಮ್ಮೆ ಬೆಂಕಿ ಕೊಟ್ಟರೆ ಸಾಕು ಉರಿದು ಹೋಗುತ್ತದೆ. ಉರಿಯದಿದ್ದರೂ ಪರವಾಗಿಲ್ಲ. ಆದರೆ ನಿನ್ನ ಅಮ್ಮ ಮಾಲೆ ಪಟಾಕಿಯಂತೆ ಒಂದು ಬತ್ತಿಗೆ ಬೆಂಕಿಕೊಟ್ಟರೆ ಎಲ್ಲಾ ಒಟ್ಟಿಗೆ ಉರಿಯುತ್ತದೆ, ಉರಿಯದಿದ್ದರೆ ನಡುವಲ್ಲಿ ಯಾವುದೋ ಪಟಾಕಿ ಬಾಕಿ ಇರಬಹುದೆಂದು ಹತ್ತಿರ ಹೋಗಲೂ ಅಂಜಿಕೆಯಾಗುತ್ತೆ.
ND

ದಾರಿ ಖರ್ಚಿಗೆ ಆಭರಣ
ಟೀಚರ್- ಸೀತೆಯನ್ನು ರಾವಣ ಕದ್ದೊಯ್ಯುವಾಗ ಆಕೆ ಯಾಕೆ ದಾರಿಯಿಡೀ ತನ್ನ ಆಭರಣಗಳನ್ನು ಎಸೆದಳು?
ಗುಂಡ- ವಿದೇಶಯಾತ್ರೆ ಮಾಡುವಾಗ ಹೆಚ್ಚು ಆಭರಣ ಧರಿಸಬಾರದೆಂದು ಅವಳಿಗೆ ಮೊದಲೇ ತಿಳಿದಿತ್ತು.
ರಂಗ- ಅದಲ್ಲ ಮೇಡಂ, ಹೇಗೊ ತನ್ನ ಗಂಡ ತನ್ನನ್ನು ಹುಡುಕಿಕೊಂಡು ಬರುವನು. ಅವಳ ಆಭರಣ ಅವರ ದಾರಿ ಖರ್ಚಿಗೆ ಬೇಕಾಗ ಬಹುದೆಂದು ಅವಳಿಗೆ ಗೊತ್ತಿತ್ತು.
ಟೀಚರ್- !!!!

ಪಾತಾಳದಲ್ಲಿ ಭೂಮಿ
ರಂಗ- ದೀಪಾವಳಿಗೆ ಬಲೀಂದ್ರ ನಿನ್ನಲ್ಲಿಗೆ ಬಂದ್ರೆ ಏನು ಕೇಳುತ್ತೀಯಾ?
ಗುಂಡ- ಪಾತಾಳದಲ್ಲಿ ಒಂದು ಸೆಂಟ್ ಭೂಮಿಗೆ ಎಷ್ಟು ಬೆಲೆ?

ಭಯಂಕರ ಪಟಾಕಿ
(ರಂಗ ಪಟಾಕಿ ವ್ಯಾಪಾರಿಯಲ್ಲಿ)
ರಂಗ:(ಗರ್ವದಿಂದ) ಸ್ವಾಮೀ ನನಗೊಂದು ಪಟಾಕಿ ಕೊಡಿ. ಅದು ಕಡಿಮೆ ಬೆಲೆಯದ್ದಾಗಿದ್ದು, ಅದರ ಶಬ್ದ ಕೇಳಿ ನೆರೆಮನೆಯವರೆಲ್ಲ ಎದ್ದು ಹೊರಗೆ ಬಂದು ನಮ್ಮ ಮನೆಯತ್ತವೇ ದೃಷ್ಟಿ ಹರಿಸಬೇಕು. ಈವರೆಗೆ ಯಾರೂ ಸದ್ದು ಮಾಡಿರದಷ್ಟು ಶಬ್ದ ನಮ್ಮ ಮನೆಯಿಂದ ಕೇಳಬೇಕು.
ವ್ಯಾಪಾರಿ: (ತುಸು ಆಲೋಚಿಸಿ) ಸ್ವಾಮೀ ನೀವು ಹೇಳಿದಂತಹ ಪಟಾಕಿ ಈ ಅಂಗಡಿಯಲ್ಲಿ ಇಲ್ಲ. ಆದ್ರೂ ನಾನು ಒಂದು ಉಪಾಯ ಹೇಳಬಲ್ಲೆ. ಇದರಿಂದಾಗಿ ಊರೇ ಎದ್ದು ಹೊರಗೆ ಬರುತ್ತದೆ .ನೋಡಿ!!
ರಂಗ:(ಕುತೂಹಲದಿಂದ)ಹೇಳಿ...
ವ್ಯಾಪಾರಿ:ಈ ಪಟಾಕಿಗೆ ಬೆಲೆ ತೀರಾ ಕಡಿಮೆ.(ಗುಟ್ಟಿನಲ್ಲಿ)ನಿಮ್ಮ ಹೆಂಡತಿಯಲ್ಲಿ ನೀವು ನೆರೆಮನೆಯಾಕೆಯನ್ನು ಪ್ರೀತಿಸುತ್ತೇನೆ ಎಂದು ಹೇಳಿ ಬಿಡಿ. ಮತ್ತೆ ನೋಡುತ್ತಾ ಇರಿ. ಊರಿಗೇ ಊರೇ ನಿಮ್ಮ ಅಂಗಳದಲ್ಲಿರುತ್ತದೆ.
ರಂಗ:!!!!!!