ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಒಂದೇ ದಿನ ಬಾಕಿ: ಗೆಲ್ಲುವ ನಾಯಕರ ಮೇಲೆ ಬಾಜಿ
ಮಂಗಳೂರಿನಲ್ಲಿ ಬೆಟ್ಟಿಂಗ್ ದಂಧೆ ಜೋರಾಗಿದ್ದು, ಅಭ್ಯರ್ಥಿಗಳ ಗೆಲುವು-ಸೋಲಿನ ಮೇಲೆ ಹಣ ಹೂಡಿಕೆ ಮಾಡಲಾಗುತ್ತಿದೆ. ಪ್ರಮುಖವಾಗಿ ಮಂಡ್ಯ ಕ್ಷೇತ್ರದ ಮೇಲೆ ಬಾಜಿ ಕಟ್ಟುವವರ ಕಣ್ಣು ಬಿದ್ದಿದೆ. ಇಲ್ಲಿ ಸುಮಲತಾ ಅಂಬರೀಶ್ ಮತ್ತು ಸಿಎಂ ಪುತ್ರ ನಿಖಿಲ್ ನಡುವೆ ಫೈಟ್ ಜೋರಾಗಿದ್ದು ಬಾಜಿಗಳ ಫೇವರಿಟ್ ತಾಣವಾಗಿದೆ. ನಾಳೆ ಫಲಿತಾಂಶ ಬಂದ ಬಳಿಕ ಬಾಜಿ ಕಟ್ಟಿ ಗೆದ್ದವನು ಗೆದ್ದ. ಸೋತವನು ಸತ್ತ ಎಂಬ ಪರಿಸ್ಥಿತಿಯಾಗಲಿದೆ.