ಪ್ರಶ್ನೆ : ನನಗೆ 35 ವರ್ಷವಯಸ್ಸಾಗಿದ್ದು, ನಾನುಐಟಿಉದ್ಯೋಗದಲ್ಲಿದ್ದೇನೆ. ಕೆಲವುತಿಂಗಳಹಿಂದೆನಾನುನನ್ನಬಾಸ್ಹೆಂಡತಿಯನ್ನುಆಫೀಸ್ನಭೋಜನಕೂಟಸಮಾರಂಭದಲ್ಲಿಭೇಟಿಮಾಡಿದ್ದೆ. ಆಕೆನನ್ನಕ್ಲಾಸ್ಮೆಟ್ಎಂದುನನಗೆಅಂದುತಿಳಿಯಿತು. ಆದ್ದರಿಂದನಾವಿಬ್ಬರುತುಂಬಾಕ್ಲೋಸ್ಆಗಿದ್ದು, ಕಾಲ್ಮಾಡಿಮಾತನಾಡುತ್ತಿದ್ದೇವು. ಅಷ್ಟೇಅಲ್ಲದೇಸಾಮಾಜಿಕಮಾಧ್ಯಮದಮೂಲಕವುಸಂಪರ್ಕದಲ್ಲಿದ್ದೇವು.
ನಂತರದ ದಿನಗಳಲ್ಲಿ ಆಕೆ ತನ್ನ ಖಾಸಗಿ ವಿಚಾರಗಳನ್ನು ಹಂಚಿಕೊಳ್ಳತೊಡಗಿದ್ದಳು. ಆಕೆಯ ಪತಿಗೆ ಹೆಚ್ಚು ವಯಸ್ಸಾಗಿದ್ದು ಇದರಿಂದ ತನಗೆ ಲೈಂಗಿಕ ಜೀವನದಲ್ಲಿ ತೃಪ್ತಿ ಸಿಗುತ್ತಿಲ್ಲ ಎಂದು ಹೇಳುತ್ತಿದ್ದಳು. ಕ್ರಮೇಣ ನಾವಿಬ್ಬರೂ ತುಂಬಾ ಹತ್ತಿರವಾಗತೊಡಗಿದ್ದೇವು. ಇದೀಗ ನನ್ನ ಸಮಸ್ಯೆ ಏನೆಂದರೆ ನಮ್ಮಿಬ್ಬರ ಈ ಸಂಬಂಧ ನನ್ನ ವೃತ್ತಿ ಜೀವನವನ್ನು ಹಾಳು ಮಾಡಬಹುದು. ದಯವಿಟ್ಟು ನಾನು ಏನು ಮಾಡಬೇಕೆಂಬುದನ್ನು ತಿಳಿಸಿ.
ಉತ್ತರ: ಈ ರೀತಿಯ ಪರಿಸ್ಥಿತಿ ನಿಮ್ಮ ವೈಯಕ್ತಿಕ ಹಾಗೂ ವೃತ್ತಿಪರ ಎರಡು ಕ್ಷೇತ್ರಗಳಲ್ಲಿ ಅಪಾಯವನ್ನು ಉಂಟುಮಾಡಬಹುದು. ಕಾಲೇಜು ಸ್ನೇಹಿತರನ್ನು ಕಂಡಾಗ ಉತ್ಸಾಹಕರಾಗುವುದು ಸಹಜ. ಆದರೆ ಆ ವೇಳೆ ನಿಮ್ಮ ಸಮಯ, ಸ್ಥಳ, ಸಂದರ್ಭಗಳ ಬಗ್ಗೆ ನಿಮಗೆ ಅರಿವಿರಬೇಕು.
ಆದ್ದರಿಂದ ನಿಮ್ಮ ಬಾಸ್ ಹೆಂಡತಿಯ ಜೊತೆಗೆ ಕುಳಿತು ಮಾತನಾಡಿ ನಿಮ್ಮ ಆಲೋಚನೆ ಹಾಗೂ ಭಾವನೆಗಳನ್ನು ಆಕೆಗೆ ತಿಳಿಯುವಂತೆ ಅರ್ಥಮಾಡಿಸಿ. ಇನ್ನೊಂದು ಬಹಳ ಮುಖ್ಯವಾದ ವಿಚಾರವೆನೆಂದರೆ ಇಲ್ಲಿ ನಿಮ್ಮ ಆಯ್ಕೆ ಏನೆಂಬುದನ್ನು ಮೊದಲು ನಿರ್ಧರಿಸಿ. ನೀವು ಯಾವುದನ್ನು ಬಯಸುತ್ತೀರಿ? ಯಾವುದನ್ನು ಬಿಡುತ್ತೀರಿ? ಎಂದು ನೀವೇ ತಿರ್ಮಾನಿಸಿ.