ಬೇಗ ಗರ್ಭಿಣಿ ಮಾಡು ಅನ್ನೋ ಹುಡುಗಿ

ಸೋಮವಾರ, 26 ಆಗಸ್ಟ್ 2019 (15:28 IST)
ಪ್ರಶ್ನೆ: ಸರ್, ನಾನೊಂದು ಹುಡುಗಿಯನ್ನು ಪ್ರೀತಿ ಮಾಡುತ್ತಿರುವೆ. ಕಳೆದ ನಾಲ್ಕೈದು ವರ್ಷಗಳಿಂದ ನಾವಿಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಲವ್ ಮಾಡುತ್ತಿದ್ದೇವೆ. ನಾನು ನನ್ನ ಪ್ರೇಯಸಿ ಜತೆ ನಿರೋಧ ಬಳಸಿಯೇ ಲೈಂಗಿಕ ಕ್ರಿಯೆ ನಡೆಸಿರುವೆ.

ಆದರೆ ಇದೀಗ ನನ್ನ ಹುಡುಗಿಯನ್ನು ಬೇರೆಯವರಿಗೆ ಕೊಟ್ಟು ಮದುವೆ ಮಾಡುತ್ತಿದ್ದಾರೆ. ಹೀಗಾಗಿ ಬೇಗ ನನ್ನ ಗರ್ಭಿಣಿ ಮಾಡು ಅಂತಿದ್ದಾಳೆ. ನೀನು ಹಾಗೆ ಮಾಡಿದ್ರೆ ಮುಂದೆ ನನ್ನನ್ನು ನೀನಲ್ಲದೇ ಬೇರೆ ಯಾರೂ ಮದುವೆಯಾಗೋಕೆ ಸಾಧ್ಯವಿಲ್ಲ ಅಂತ ಹೇಳ್ತಿದ್ದಾಳೆ. ಮುಂದೇನು ಮಾಡೋದು?

ಉತ್ತರ: ಮನಸಾರೆ ಪ್ರೀತಿ ಮಾಡೋವಾಗ ನೀವು ಲೈಂಗಿಕ ಕ್ರಿಯೆ ನಡೆಸಿರೋದು ತಪ್ಪು. ಇನ್ನು ನಿಮ್ಮಿಬ್ಬರ ಪ್ರೀತಿಯ ವಿಷಯವನ್ನು ಮನೆಯವರಿಗೆ ಹೇಳಿ ಒಪ್ಪಿಸಿ. ಅದನ್ನು ಬಿಟ್ಟು ನೀವು ಅವಳನ್ನು ಗರ್ಭಿಣಿ ಮಾಡಿದರೆ ಮುಂದೆ ಯಾವ ರೀತಿ ತಿರುವು ಪಡೆದುಕೊಳ್ಳುತ್ತದೆಯೋ ಗೊತ್ತಿಲ್ಲ.

ಅವರಪ್ಪ – ಅಮ್ಮನ ಮಾತು ಕೇಳಿ ನಿಮ್ಮ ಮೇಲೆ ರೇಪ್ ಕೇಸ್ ಹಾಕಿದರೆ ಮುಂದೇನು ಮಾಡುವಿರಿ? ಕೆಟ್ಟದಾರಿ ತುಳಿಯದೇ ಮನೆ ಮಂದಿ ಜತೆ ಕುಳಿತು ಮಾತಾಡಿ, ನಿಮ್ಮ ಹುಡುಗಿ ಮನೆಯವರೊಂದಿಗೆ ಮಾತನಾಡಿ ಸಮಸ್ಯೆ ಪರಿಹರಿಸಿಕೊಳ್ಳಿ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ