ರಾತ್ರಿ ವೇಳೆ ಹೆಚ್ಚಾಗಿ ಸ್ಮಾರ್ಟ್ ಫೋನ್ ಬಳಸಬೇಡಿ, ಎಚ್ಚರ!

ಮಂಗಳವಾರ, 19 ಏಪ್ರಿಲ್ 2016 (17:16 IST)
ನಾವೆಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ದಾಸರಾಗಿರುತ್ತೇವೆ. ನಮ್ಮ ಜೀವನವು ಈ ಉಪಕರಣಗಳ ಸುತ್ತ ತಿರುಗುತ್ತದೆ.  ಆದರೆ ಈಗೊಂದು ಎಚ್ಚರಿಕೆಯ ಕರೆ ಹೊರಬಿದ್ದಿದೆ. ಇತ್ತೀಚಿನ ಸಮೀಕ್ಷೆಯಲ್ಲಿ ರಾತ್ರಿವೇಳೆ ಸ್ಮಾರ್ಟ್‌ಫೋನ್ ಬಳಸುವುದರಿಂದ ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. 
 
 ಮಿಚಿಗನ್ ವಿವಿಯ ಹೊಸ ಅಧ್ಯಯನದಲ್ಲಿ, ಸ್ಮಾರ್ಟ್‌ಫೋನ್ ರಾತ್ರಿ ವೇಳೆ ಹೆಚ್ಚಾಗಿ ಬಳಸುವವರು ಹೆಚ್ಚು ಸುಸ್ತಾದವರಂತೆ ಕಾಣುತ್ತಾರೆ ಮತ್ತು ಮರುದಿನ ಅಷ್ಟೊಂದು ಲವಲವಿಕೆಯಿಂದ ಕೆಲಸ ಮಾಡುವುದಿಲ್ಲ. 
 
 ಇದಕ್ಕೆ ಕಾರಣವನ್ನು ಅಧ್ಯಯನ ಮಾಡಿದಾಗ, ರಾತ್ರಿವೇಳೆಯಲ್ಲಿ ಬೆಳಕು ನಮ್ಮ ಜೈವಿಕ ಗಡಿಯಾರವನ್ನು ದಿಕ್ಕುತಪ್ಪಿಸುತ್ತದೆ ಮತ್ತು ನೀಲಿ ತರಂಗಾಂತರವು ನಮ್ಮ ದೇಹಕ್ಕೆ ಹೆಚ್ಚು ಪರಿಣಾಮ ಬೀರುತ್ತದೆ. ರಾತ್ರಿ ವೇಳೆಯ ಬೆಳಕಿನಿಂದ ನಮ್ಮ ಮೆದುಳು ಗೊಂದಲಕ್ಕೆ ಗುರಿಯಾಗಿ ನಿದ್ರೆಗೆ ಸಹಕಾರಿಯಾದ ಮೆಲಟೋನಿನ್ ಹಾರ್ಮೋನ್ ಉತ್ಪಾದನೆಯನ್ನು ಕುಂಠಿತಗೊಳಿಸುತ್ತದೆ. 
 
  ಸ್ಮಾರ್ಟ್‍‌ಫೋನ್‌ನಿಂದ ಭಾರಿ ಪ್ರಮಾಣದ ನೀಲಿ ಬೆಳಕು ಹೊಮ್ಮುತ್ತದೆ. ಇದು ಬಿಸಿಲಿನಲ್ಲೂ ಕಾಣುವಂತೆ ಮಾಡುತ್ತದೆ. ಆದ್ದರಿಂದ ರಾತ್ರಿವೇಳೆ ತುಂಬಾ ಹೊತ್ತು ಇದನ್ನು ಬಳಸಿದರೆ ನಿದ್ರೆಗೆ ಜಾರುವುದು ಕಷ್ಟವೆನಿಸುತ್ತದೆ.ಇದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತವೆ. 

ವೆಬ್ದುನಿಯಾವನ್ನು ಓದಿ