ಯಾಕ್ರೀ ಕೆಂಗಣ್ಣು?

ಶನಿವಾರ, 22 ನವೆಂಬರ್ 2014 (12:20 IST)
ಕಣ್ಣಿಗೆ ತಣ್ಣಗಾಗಿ ತಗುಲುವ ಸೋಂಕಿಗೆ ಕೆಂಗಣ್ಣು ಎಂದು ಹೇಳುತ್ತಾರೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು 'ಕಂಜೆಕ್ಟೀವ್ ವೈರಲ್' ಎಂದು ಕರೆಯುತ್ತಾರೆ.
 
ಕಣ್ಣುಗಳಿಗೆ ಪದೇ ಪದೇ ತಾಗುವ ಈ ಸೋಂಕು ಅಪಾಯಕಾರಿ ಅಲ್ಲವಾದರೂ ಸಣ್ಣ ಮಟ್ಟಿನ ಜಾಗರೂಕತೆ ವಹಿಸಬೇಕಾಗುತ್ತದೆ ಇಲ್ಲದಿದ್ದರೆ ಸುಮ್ಮನೆ ಅಪಾಯ ತಂದೊಡ್ಡಬೇಕಾಗುತ್ತದೆ.
 
ಇದು ಶೀಘ್ರವಾಗಿ ಹರಡುವ ರೋಗವಾಗಿದೆ. ಇದು ಪ್ರತೀವರ್ಷ ಕಾಡುತ್ತಿರುವುದರಿಂದ ಸಣ್ಣ ಮಟ್ಟಿನ ಕಿರಿಕಿರಿ ಅನುಭವಿಸಬೇಕಾಗುತ್ತದೆ.
 
ಇಂತಹ ಕೆಂಗಣ್ಣಿಗೆ ಹೋಮಿಯೋಪತಿ ವೈದ್ಯ ಪದ್ದತಿಯಲ್ಲಿ ಚಿಕಿತ್ಸೆ ಪಡೆಯಬಹುದು. 'ಯುಫ್ರೇಶಿಯಾ' ಎನ್ನುವ ಈ ಜೌಷಧಿಯನ್ನು ಸೇವನೆ ಮಾಡಬೇಕು ಜತೆಗೆ ಕಣ್ಣಿಗೆ ಕೂಡಾ ಬಿಡಬಹುದು. 
 
ಈ 'ಯುಫ್ರೇಶಿಯಾ' ಔಷಧಿ ಮೂಲಕ ರೋಗ ಗುಣವಾಗಿರುವುದನ್ನು ಯೋಮಿಯೋಪತಿ ವೈದ್ಯರುಗಳು ಸಾಬೀತುಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಆ ಔಷಿಧಿಯನ್ನು ತೆಗೆದುಕೊಂಡರೆ ಸೋಂಕು ತಗುಲದಂತೆ ತಟೆಗಟ್ಟಬಹುದು ಎಂದು ಸಲಹೆ ಮಾಡಲಾಗಿದೆ.
 
ಕೆಂಗಣ್ಣಿಗೆ 'ಯುಫ್ರೇಶಿಯಾ' ಅಲ್ಲದೆ 'ಬೆಲ್ಲಡೋನಾ', 'ರಸ್ಟೋಕ್', 'ಆಕೋನೈಟ್' ಮುಂತಾದ ಜೌಷಧಿಗಳು ಸೇವನೆ ಮಾಡಬಹುದಾದ ಕಾರಣ, ತೆಗೆದುಕೊಳ್ಳುವ ಮೊದಲು ವೈದ್ಯರ ಸಲಹೆ ಪಡೆಯುವುದು ಅಗತ್ಯ.
 
ಸೋಂಕು ಆದ ಕೂಡಲೇ ಚಿಕಿತ್ಸೆ ಪ್ರಾರಂಭಿಸಿದರೆ ಶೀಘ್ರದಲ್ಲಿ ಗುಣಮುಖವಾಗಬಹುದು, ರಕ್ಷಣೆಗಾಗಿ ಕನ್ನಡಕ ಬಳಸಿ, ಕಣ್ಣನ್ನು ಕೈಯಿಂದ ಒಂದೇ ಸಮನೆ ಉಜ್ಜಬೇಡಿ. ಶುದ್ಧ ನೀರಿನಿಂದ ಕಣ್ಣನ್ನು ತೊಳೆಯಿರಿ. ಟೀವಿ ಮತ್ತು ಓದಿಗೆ ವಿರಾಮ ನೀಡಿ ವಿಶ್ರಾಂತಿ ಪಡೆಯಿರಿ.                                                                                                               

ವೆಬ್ದುನಿಯಾವನ್ನು ಓದಿ