ಮುಗಾ(MUGA) ಸ್ಕ್ಯಾನ್‌ ಬಳಕೆ ಹೇಗೆ

ಶನಿವಾರ, 22 ನವೆಂಬರ್ 2014 (12:01 IST)
ಮುಗಾ ಸ್ಕ್ಯಾನ್ ಅಂದರೆ, ಮಲ್ಟಿಪಲ್ ಗೇಟೆಡ್ ಅಕ್ವಿಸಿಜನ್ ಸ್ಕ್ಯಾನ್. ಹೃದಯದ ಕಾರ್ಯಾಚರಣೆಯನ್ನು ಪತ್ತೆ ಹಚ್ಚಲು ಇದು ಅತ್ಯಂತ ಪ್ರಯೋಜನಕಾರಿ. ಇದು ಹೃದಯದ ಬಡಿತದ ಚಲನೆಯ ಚಿತ್ರಣವನ್ನು ತಯಾರಿಸುತ್ತದೆ, ಮತ್ತು ಇ ಇಮೇಜಿನಿಂದ ಹೃದಯದ ಕವಾಟಗಳ ಆರೋಗ್ಯವನ್ನು ಪತ್ತೆಹಚ್ಚಬಹುದಾಗಿದೆ.
 
ಇದು ಹೇಗೆ ಕಾರ್ಯಾಚರಿಸುತ್ತದೆ ಎಂದರೆ, ಟೆಕ್‌ನೇಟಿಯಮ್ 99 ಎಂಬ ವಿಕಿರಣಶೀಲ ಉಪಕರಣವನ್ನು ಕೆಂಪು ರಕ್ತ ಕಣಗಳಿಗೆ ಅಳವಡಿಸಿ, ಬಳಿಕ ರೋಗಿಯ ರಕ್ತದ ಹರಿವಿಗೆ ಕೆಂಪು ರಕ್ತದ ಕಣಗಳನ್ನು ಸೇರಿಸುವ ಮೂಲಕ ಮುಗಾ ಸ್ಕ್ಯಾನ್ ಮಾಡಲಾಗುತ್ತದೆ. ರಕ್ತ ಕಣಗಳನ್ನು ಸೇರಿಸಿದ ಬಳಿಕ ರೋಗಿಯನ್ನು ವಿಶೇಷ ಕ್ಯಾಮರಾ (ಗಾಮಾ) ಕೆಳಗೆ ಇರಿಸಲಾಗುತ್ತದೆ. ಈ ಕ್ಯಾಮಾರವು ಟೆಕ್‌ನೇಟಿಯಮ್ ಲೇಬಲ್ಡ್ ಕೆಂಪುಕಣಗಳ ಕಡಿಮೆ ಮಟ್ಟದ ವಿಕಿರಣಶೀಲತೆಯನ್ನು ಪತ್ತೆ ಹಚ್ಚುವ ಸಾಮರ್ಥ್ಯ ಹೊಂದಿದೆ. ಹೃದಯದ ಗೂಡುಗಳಲ್ಲಿ ಕೆಂಪುರಕ್ತಕಣಗದಳು ತುಂಬುವ ಕಾರಣ ಗಾಮಾ ಕ್ಯಾಮರಾವು ತಯಾರಿಸಿರುವ ಇಮೇಜ್ ಆ ಕವಾಟಗಳ ನಕಾಶೆಯಾಗಿರುತ್ತದೆ
 
ಕಂಪ್ಯೂಟರ್ ಅಳವಡಿಕೆಯೊಂದಿಗೆ ಅಂತಿಮ ಉತ್ಪನ್ನವು ಹೃದಯ ಬಡಿತದ ಚಲನ ಚಿತ್ರವಾಗುತ್ತದೆ.
ಹೃದಯದ ಸ್ನಾಯುಗಳು ಅಥವಾ ಹೃದಯದ ಗೂಡಿಗೆ ಹಾನಿಯಾದಲ್ಲಿ ಮುಗಾ ಸ್ಕ್ಯಾನ್ ನಿಖರವಾದ ಪತ್ತೆಯನ್ನು ನೀಡುತ್ತದೆ. ಯಾವ ಭಾಗಕ್ಕೆ ಹಾನಿಯಾಗಿದೆ ಮತ್ತು ಅದರ ಅಳತೆ ಎಷ್ಟೆಂಬ ನಿಖರತೆಯನ್ನು ಇದು ಒದಗಿಸುವ ಕಾರಣ ಚಿಕಿತ್ಸೆಗೆ ಅತ್ಯುಪಕಾರಿಯಾಗುತ್ತದೆ. ಅಲ್ಲದೆ ರಕ್ತದ ಹೊರಚೆಲ್ಲುವಿಕೆಯ ನಿಖರ ಅಳತೆಯನ್ನೂ ಇದು ಒದಗಿಸುತ್ತದೆ.
 
ಹಾಲ್ಟರ್ ಮಾನಿಟರ್‌ಗಳು ಮತ್ತು ಈವೆಂಟ್ ರೆಕಾರ್ಡರ್‌ಗಳು
ಸುದೀರ್ಘಾವಧಿಗೆ ರೋಗಿಯ ಇಸಿಜಿಯನ್ನು ದಾಖಲಿಸಲು ಚಲನಾ ಪರಿವೀಕ್ಷಣೆ ಪರೀಕ್ಷೆಯನ್ನು (ಹಾಲ್ಟರ್ ಮಾನಿಟರ್‌ಗಳು ಮತ್ತು ಈವೆಂಟ್ ರೆಕಾರ್ಡ್‌ಗಳು) ಮಾಡಲಾಗುತ್ತದೆ. ಇದಕ್ಕೆ ರೋಗಿ ಆಸ್ಪತ್ರೆಯಲ್ಲಿ ದಾಖಲಾಗ ಬೇಕಿರುವ ಅವಶ್ಯಕತೆ ಇಲ್ಲ. ಹೊರರೋಗಿಯಾಗಿದ್ದುಕೊಂಡೇ ತಪಾಸಣೆ ನಡೆಸಬಹುದು. ಆಗಾಗ ಬಂದು ಹೋಗುವಂತಹ ಅಸ್ಥಿರ ಹೃದಯದ ತೊಂದರೆಗಳನ್ನು ಪತ್ತೆ ಹಚ್ಚಲು ಈ ಪರೀಕ್ಷೆ ಮಾಡಲಾಗುತ್ತದೆ. ಪ್ರಮಾಣಿತ ಇಸಿಜಿ ವೇಳೆಗೆ ಈ ಸಮಸ್ಯೆಗಳು ಗೋಚರವಾಗುವುದಿಲ್ಲ. ಹೃದಯ ಬಡಿತದ ಏರುಪೇರು ಮತ್ತು ರಕ್ತಪರಿಚಲನೆಯ ಏರುಪೇರನ್ನು ಪತ್ತೆ ಹಚ್ಚಲು ಈ ಪರೀಕ್ಷೆಯು ನಿರ್ದಿಷ್ಟವಾಗಿ ಪ್ರಯೋಜನಕಾರಿ.
 
ಅಂಬ್ಯುಲೇಟರಿ ಮಾನಿಟರಿಂಗ್ ಪರೀಕ್ಷೆಯನ್ನು ಹಾಲ್ಟರ್ ಮಾನಿಟರ್ ಮತ್ತು ಈವೆಂಟ್ ರೆಕಾರ್ಡರ್ ಎಂಬ ಎರಡು ವಿಧಾನಗಳ ಮೂಲಕ ಮಾಡಲಾಗುತ್ತದೆ.
 
ಹಾಲ್ಟರ್ ಮಾನಿಟರ್ ವಿಧಾನದಲ್ಲಿ ವಿದ್ಯುನ್ಮಾನ ಹರಿವುಗಳನ್ನು ಚರ್ಮಕ್ಕೆ ಲೇಪಿಸಲಾಗುತ್ತದೆ(ಇಸಿಜಿಗೆ ಉಪಯೋಗಿಸುವಂತಹ) ಮತ್ತು ಇದನ್ನು ಟೇಪ್ ರೆಕಾರ್ಡರ್‌ಗೆ ಅಳವಡಿಸಲಾಗುತ್ತದೆ. ರೋಗಿಯನ್ನು ಮನೆಗೆ ಕಳುಹಿಸಲಾಗುತ್ತದೆ. ಟೇಪ್‌ರೆಕಾರ್ಡರ್ 24ರಿಂದ 48 ಗಂಟೆಗಳ ಕಾಲ ನಿರಂತರ ಇಸಿಜಿ ಶೋಧನೆಯನ್ನು ದಾಖಲಿಸುತ್ತದೆ. ಈ ವೇಳೆ ರೋಗಿ ತನ್ನ ಮಾಮೂಲಿ ಚಟುವಟಿಕೆಯಲ್ಲಿ ನಿರತವಾಗಿರುತ್ತಾನೆ. ನಿಗದಿತ ಅವಧಿಯ ಬಳಿಕ ಹಾಲ್ಟರ್ ಸಾಧನವನ್ನು ತೆಗೆದು ವಿಶ್ಲೇಷಿಸಲಾಗುತ್ತದೆ.
ಹಾಲ್ಟರ್ ಮಾನಿಟರ್ ವಿಧಾನಕ್ಕೆ ತದ್ವಿರುದ್ಧವೆನ್ನುವಂತೆ ಈವೆಂಟ್ ರೆಕಾರ್ಡರ್‌ಗಳು ಪ್ರತೀ ಹೃದಯ ಬಡಿತವನ್ನು ದಾಖಲಿಸುವುದಿಲ್ಲ. ಬದಲಿಗೆ ಆವರ್ತನ ಟೇಪನ್ನು ಬಳಸಲಾಗುತ್ತದೆ. ಇದು ರೋಗಿಯ ಹೃದಯ ಬಡಿತವನ್ನು 30 ಸೆಕುಂಡುಗಳ ಕಾಲ ದಾಖಲಿಸುತ್ತದೆ. ರೋಗಿಯು ಅದನ್ನು ಧರಿಸಿದ್ದ ವೇಳೆ ಕೊನೆಯ 30 ಸೆಕುಂಡುಗಳ ಕಾಲದ ಇಸಿಜಿ ದಾಖಲಾಗುತ್ತದೆ.
 
 ರೋಗಿಗೆ ರೋಗ ಲಕ್ಷಣಗಳು ಗೋಚರವಾದಾಗ ದಾಖಲಾತಿಯ ಗುಂಡಿಯನ್ನು ಒತ್ತಿದರೆ, ಅದು ಬಳಿಕ ದೂರವಾಣಿ ಮೂಲಕ ಇಂಟರ್‌ಪ್ರೆಟಿಂಗ್ ಕೇಂದ್ರಕ್ಕೆ ರವಾನೆಯಾಗುತ್ತದೆ. ಇವುಗಳ ಪ್ರಮುಖ ಉಪಯೋಗವೆಂದರೆ 30ರಿಂದ 60 ದಿನಗಳ ಕಾಲ ಇವುಗಳನ್ನು ಬಳಸಬಹುದಾಗಿದೆ. ಅಸ್ಥಿರ ಲಕ್ಷಣಗಳು ಗೋಚರವಾಗುವ ತನಕ ಕಾಯಬಹುದು. ಇನ್ನೊಂದು ಉಪಯೋಗವೆಂದರೆ, ಅಸ್ಥಿರ ಲಕ್ಷಣಗಳು ಒಂದು ಅಥವಾ ಎರಡು ನಿಮಿಷಗಳ ಕಾಲ ಕಾಣಿಸಿಕೊಳ್ಳುವ ಕಾಲ ಇಸಿಜಿ ಎಲೆಕ್ಟ್ರಾಡ್‌ಗಳನ್ನು ಎಲ್ಲಾ ಕಾಲದಲ್ಲೂ ಅಳವಡಿಸಿಕೊಂಡೇ ಇರಬೇಕಿಲ್ಲ. ಅವುಗಳ ಅಳವಡಿಕೆ ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯದ್ದಾದ ಕಾರಣ ಅಗತ್ಯವಿದ್ದಾಗ ಮಾತ್ರ ಅಳವಡಿಸಿಕೊಂಡರೆ ಸಾಕು.
 
ಹಾಲ್ಟರ್ ಮಾನಿಟರ್ ನಿರಂತರ 24ರಿಂದ 48 ಗಂಟೆಗಳ ಕಾಲ ರೋಗಿಯ ಹೃದಯ ಬಡಿತವನ್ನು ವೈದ್ಯರಿಗೆ ತಿಳಿಸುತ್ತದೆ. ಈ ಸಂದರ್ಭದಲ್ಲಿ ಯಾವುದಾದರೂ ಅಸಹಜ ಬಡಿತಗಳು ಉಂಟಾದಲ್ಲಿ ಅವುಗಳನ್ನು ಪತ್ತೆಹಚ್ಚಬಹುದು. ಇದಲ್ಲದೆ ಇದು ರಕ್ತಪೂರೈಕೆಯ ಕೊರತೆಯನ್ನು ಪತ್ತೆ ಹಚ್ಚಲು ಸಹ ಸಹಕಾರಿಯಾಗಿದೆ.
 
ಹೃದಯದ ಬಡಿತದ ಲಯದಲ್ಲಿ ವ್ಯತ್ಯಾಸವಿದ್ದಲ್ಲಿ ಇದನ್ನು ಪತ್ತೆಹಚ್ಚಲು ಈವೆಂಟ್ ರೆಕಾರ್ಡರ್‌ಗಳು ಉತ್ತಮ ಸಾಧನವಾಗಿವೆ. ಸಾಮಾನ್ಯವಾಗಿ ತಿಂಗಳಿಗೊಂದಾವರ್ತಿ ಅಥವಾ ಅದಕ್ಕೂ ಹೆಚ್ಚಿನ ಅವಧಿಗೆ ಒಂದು ಬಾರಿ ಹೃದಯ ಬಡಿತದ ಏರುಪೇರಾದಲ್ಲಿ ಅದನ್ನು ದಾಖಲಿಸಲು ಹಾಲ್ಟರ್‌ ಮಾನಿಟರ್‌ಗೆ ಆಗದಿರಬಹುದು. ಅಂತಹ ಸಂದರ್ಭದಲ್ಲಿ ಈವೆಂಟ್ ಮಾನಿಟರ್ ಈ ಕೆಲಸ ಮಾಡಬಲ್ಲುದು. ಅಲ್ಲದೆ ಇದು ಅಸ್ಥಿರ ರಕ್ತಪರಿಚಲನೆಯ ಏರುಪೇರನ್ನು ದಾಖಲಿಸಲೂ ಸಹ ಸಹಾಯಕಾರಿಯಾಗಿದೆ.

ವೆಬ್ದುನಿಯಾವನ್ನು ಓದಿ