ಡ್ಯಾನ್ಸ್ ಮಾಡುವಾಗ ಸ್ಥನಗಳು ಕುಣಿಯುತ್ತವೆ…
ಶುಕ್ರವಾರ, 22 ಮಾರ್ಚ್ 2019 (16:06 IST)
ಸಮಸ್ಯೆ : ನಾನು 20 ವರ್ಷದ ಸುಂದರ ಯುವತಿ . ಕಾಲೇಜ್ ಗೆ ಹೋಗ್ತಾ ಇದ್ದೇನೆ . ಮುಖ್ಯವಾಗಿ ನಾನು ಡ್ಯಾನ್ಸರ್ . ಭರತನಾಟ್ಯ ಹಾಗೂ ವೆಸ್ಟರ್ನ್ ಡ್ಯಾನ್ಸ್ ಮಾಡುತ್ತೇನೆ . ಹಲವಾರು ಪ್ರಶಸ್ತಿಗಳು ಬಂದಿವೆ . ನನ್ನ ಸಮಸ್ಯೆ ಏನೆಂದರೆ ಬಲಸ್ತನಕ್ಕಿಂತ ಎಡಸ್ತನ ದೊಡ್ಡದಾಗಿದೆ . ಅಲ್ಲದೆ ತೊಟ್ಟುಗಳೂ ಸಹ ಬೇರೆಬೇರೆ ಗಾತ್ರದಲ್ಲಿರುತ್ತದೆ . ನನಗೆ ಡ್ಯಾನ್ಸ್ ಮಾಡಬೇಕಾಗಿರುವುದರಿಂದ ಸ್ತನಗಳು ನೆಗೆಯುತ್ತವೆ . ಇತ್ತೀಚೆಗೆ ನನ್ನ ಮೊಲೆಗಳು ಜೋತುಬಿದ್ದಿವೆ . ಇದರಿಂದ ನನಗೆ ತುಂಬಾ ಸಮಸ್ಯೆಯ ಾಗುತ್ತದೆ . ಏನ್ಮಾಡಲಿ ಪರಿಹಾರ ಹೇಳಿ ಸರ್…
ಸಲಹೆ : ಹಾಗೆ ನೋಡಿದರೆ ನಿಮ್ಮದು ಒಂದು ಸಮಸ್ಯೆಯೇ ಅಲ್ಲ . ಸಾಮಾನ್ಯವಾಗಿ ಎಡಸ್ತನವು ಬಲಸ್ತನಕ್ಕಿಂತ ಹಿರಿದಾಗಿರುತ್ತದೆ . ಸಾಮಾನ್ಯವಾಗಿ ಇದು ಗೊತ್ತಾಗುವುದಿಲ್ಲ . ಅಲ್ಲದೆ ಕೆಲವರಲ್ಲಿ ತೊಟ್ಟುಗಳೂ ಸಹ ಬೇರೆಬೇರೆ ಸ್ತಾನದಲ್ಲಿರುತ್ತದೆ . ಇದರಿಂದ ಯಾವುದೇ ಸಮಸ್ಯೆ ಇಲ್ಲ . ಹೆಚ್ಚಿನ ಹೆಣ್ಣಿನ ಸ್ತನದಲ್ಲಿ ಕೂದಲುಗಳಿರುತ್ತದೆ . ಅಲ್ಲದೆ ಕೆಲವರ ಸ್ತನಗಳಲ್ಲಿ ಮೊಡವೆ ಕೂಡಾ ಕಾಣಿಸಿಕೊಳ್ಳಬಹುದು .
ಸ್ತ್ರೀಯರು ಲೈಂಗಿಕವಾಗಿ ಉದ್ರೇಕಗೊಂಡಾಗ ಮೊಲೆಗಳು ಉಬ್ಬುತ್ತವೆ . ಮೊಲೆಗಳ ಗಾತ್ರದಲ್ಲಿ ಕೊಂಚ ಹೆಚ್ಚಳವಾಗುವುದರಿಂದ ಹಾಕಿರುವ ಬ್ರಾ ಬಿಗಿಯಾಗಬಹುದು . ಇದರಿಂದ ರಕ್ತಸಂಚಾರಕ್ಕೆ ಸಮಸ್ಯೆಯಾಗುವ ಸಾಧ್ಯತೆ ಇದೆ .
ನೀವು ಡ್ಯಾನ್ಸರ್ ಆಗಿರುವುದರಿಂದ ಮೊಲೆ ಜೋತು ಬೀಳುವ ಸಾಧ್ಯತೆ ಇರುತ್ತದೆ . ಡ್ಯಾನ್ಸ್ ಮಾಡುವಾಗ ಮೊಲೆಗಳು ವಿಪರೀತವಾಗಿ ಪುಟಿದೇಳುವುದರಿಂದ ಪುಟಿತವನ್ನು ನಿಯಂತ್ರಿಸಲು ಸರಿಯಾಗಿ ಹೊಂದಿಕೆಯಾಗುವ ಬ್ರಾ ಧರಿಸುವುದು ಉತ್ತಮ . ರಾತ್ರಿ ಮಲಗುವಾಗ ಮುಖಕೆಳಗೆ ಮಾಡಿ ಮಲಗಿದರೆ ಮೊಲೆಗಳು ಆಕಾರ ಕಳೆದುಕೊಳ್ಳುವ ಸಂಭವವೂ ಇದೆ .
ಆದ್ದರಿಂದ ಮಲಗುವ ಭಂಗಿಯಲ್ಲಿ ವಿಶೇಷ ಜಾಗರೂಕತೆ ವಹಿಸಿ . ರಾತ್ರಿ ಮಲಗುವಾಗ ಬ್ರಾ ಕಳಚುವುದು ಮುಖ್ಯ . ಯಾಕೆಂದರೆ ಬಿಗಿಯಾದ ಬ್ರಾದಿಂದ ದೇಹದಲ್ಲಿ ರಕ್ತಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ . ಮೊಲೆಗಳನ್ನು ಸುಂದರವಾಗಿ ಮಾಡಲಾಗುವುದು ಎಂಬ ಜಾಹೀರಾತು ನಂಬಬೇಡಿ . ಇವೆಲ್ಲಾ ಹಣಮಾಡುವ ತಂತ್ರಗಳು . ಮೊಲೆಗಳ ಬಗ್ಗೆ ಇರುವ ಕೀಳರಿಮೆಯನ್ನು ಬಿಟ್ಟು ಡ್ಯಾನ್ಸ್ ನಲ್ಲಿ ಉತ್ತಮ ಹೆಸರು ಸಂಪಾದಿಸಿ . ಗುಡ್ ಲಕ್.
ಆ್ಯಪ್ನಲ್ಲಿ ವೀಕ್ಷಿಸಿ x