ಬಹುತೇಕ ಮಹಿಳೆಯರಿಗೆ ಅನೇಕ ಸಂದರ್ಭಗಳಲ್ಲಿ ದೇಹದ ಹಲವು ಭಾಗಗಳಲ್ಲಿ ನೋವು, ಇನ್ನಿತರೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಝುಂಬಾ ಡ್ಯಾನ್ಸ್ ನೂತನ ಪರಿಹಾರವಾಗಿದೆ.
ಯುವತಿಯರ ಹಾಗೂ ಮಹಿಳೆಯರ ದೇಹದ ನೋವುಗಳು ಪ್ರಮುಖವಾಗಿ ಅಸಮತೋಲನದಿಂದ ಕೂಡಿದ ಆಹಾರ ಪದ್ದತಿಯಿಂದ ಆಗಿರುತ್ತದೆ. ಈ ದೇಹದ ಅಸಮತೋಲನ ಹೋಗಲಾಡಿಸಲು ದಾವಣಗೆರೆಯಲ್ಲಿ ಒಂದು ಫಿಟ್ನೆಸ್ ಟೀಮ್ ಕ್ವೀನ್ಸ್ ಝಂಭಾ ಎಂಬ ನೃತ್ಯದ ಮೂಲಕ ಆರೋಗ್ಯ ವೃದ್ದಿಗೆ ಸಹಕಾರಿಯಾಗುತ್ತಿದೆ.
ಮಹಿಳಾ ದಿನಾಚರಣೆ ಅಂಗವಾಗಿ ದಾವಣಗೆರೆಯ ರಿಧಮ್ ಫಿಟ್ನೆಸ್ ಅಂಡ್ ಇವೆಂಟ್ ಮ್ಯಾನೇಜ್ ಮೆಂಟ್ ದಾವಣಗೆರೆ ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿರುವ ಐಎಂಎ ಹಾಲನಲ್ಲಿ ಉಚಿತ ಕ್ವೀನ್ಸ್ ಝುಂಬಾ ಎಂಬ ಕಾರ್ಯಗಾರ ಹಮ್ಮಿಕೊಂಡಿತ್ತು.
ರಿಧಮ್ ಫಿಟ್ನೆಸ್ ವತಿಯಿಂದ ಹಮ್ಮಿಕೊಂಡಿದ್ದ ಈ ಕಾರ್ಯಗಾರದಲ್ಲಿ ಸುಮಾರ್ 400 ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದರು. ಈ ಫಿಟ್ನೆಸ್ ಕಾರ್ಯಗಾರದಲ್ಲಿ ನುರಿತ ತರಬೇತುದಾರ ಅನಿಲ್ ಕುಮಾರ್ ಹಾಗೂ ಫೆರಿ ತರಬೇತಿ ನೀಡಿದರು.
ಈ ಝಂಭಾ ಡ್ಯಾನ್ಸ್ ಕಾರ್ಯಗಾರರಿಂದ ಮಹಿಳೆಯರಿಗೆ ಡ್ಯಾನ್ಸ್ ಮೂಲಕ ಫಿಟ್ನೆಸ್ ಸೂತ್ರದ ಜೊತೆಗೆ ಹೃದಯದ ಆರೋಗ್ಯ ವೃದ್ದಿ, ದೇಹದ ಕ್ಯಾಲರಿ ಮತ್ತು ಕೊಬ್ಬು ನಿವಾರಣೆ ಅಂಶ ಬಗ್ಗೆ ತಿಳಿಸಿಕೊಡಲಾಯಿತು.