ಪ್ರಶ್ನೆ: ಸರ್. ನಾನು ತುಂಬಾ ಸಮಸ್ಯೆಗಳನ್ನು ಎದುರಿಸುತ್ತಿರುವೆ. ಇವೆಲ್ಲಕ್ಕೂ ಕಾರಣ ಒಬ್ಬ ಯುವತಿ. ಅವಳು ನಾನು ಒಂದೇ ಕಾಲೋನಿಯಲ್ಲಿದ್ದೇವೆ. ಪರಿಚಯವಾಗಿ ಕೆಲವೇ ದಿನಗಳಲ್ಲಿ ನನ್ನನ್ನು ಪ್ರೀತಿಸೋದಾಗಿ ಅವಳೇ ಪ್ರಪೋಸ್ ಮಾಡಿದ್ದಳು. ಆ ಬಳಿಕ ನಾವಿಬ್ಬರೂ ಆಕೆಯ ಮನೆಯಲ್ಲಿ ಯಾರೂ ಇಲ್ಲದಾಗ ರೋಮ್ಯಾನ್ಸ್ ಮಾಡಿದ್ದೇವೆ.
ಆದರೆ ಲೈಂಗಿಕ ಕ್ರಿಯೆ ನಡೆಸಿಲ್ಲ. ಇದಾಗಿ ಮೂರ್ನಾಲ್ಕು ತಿಂಗಳಾಗಿವೆ. ಆದರೆ ಆ ಹುಡುಗಿ ಈಗ ನಾನು ನಿನ್ನ ಕಾರಣದಿಂದಲೇ ಗರ್ಭಿಣಿಯಾಗಿದ್ದೇನೆ ಎನ್ನುತ್ತಿದ್ದಾಳೆ. ನನ್ನನ್ನೇ ಮದುವೆ ಆಗುವಂತೆ ಒತ್ತಾಯ ಮಾಡುತ್ತಿದ್ದಾಳೆ. ಒಂದು ಬಾರಿ ಕೇವಲ ರೋಮ್ಯಾನ್ಸ್ ಮಾಡಿದರೆ ಗರ್ಭ ಧರಿಸಬಹುದಾ? ಏನು ಮಾಡಲಿ ಹೇಳಿ.
ಉತ್ತರ: ನೀವು ಮನೆಸಾರೆ ಅವಳನ್ನು ಪ್ರೀತಿ ಮಾಡಿದ್ದೀರಿ ಇಲ್ಲವೋ ಎಂಬುದನ್ನು ಬರೆದಿಲ್ಲ. ಆದರೂ ನೀವು ಮಾಡಿದ್ದು ಸರಿ ಅಲ್ವೇ ಅಲ್ಲ. ತಪ್ಪು ನಿಮ್ಮದೋ ಅವರದೋ ಎಂಬುದು ಗೊತ್ತಿಲ್ಲ. ಇಬ್ರೂ ಇಲ್ಲಿ ತಪ್ಪು ಮಾಡಿದ್ದೀರಿ. ಯುವತಿಯೊಬ್ಬಳು ಗರ್ಭ ಧರಿಸೋಕೆ ನಿರ್ಧಿಷ್ಟ ದಿನಗಳು ಇರುತ್ತವೆ. ಮಂಥ್ಲಿ ಪಿರಿಯೆಡ್ ಆದ ಹತ್ತರಿಂದ ಹದಿನೈದು ದಿನಗಳ ಒಳಗೆ ನೀವು ಅವಳೊಂದಿಗೆ ಸೇರಿದ್ದರೆ ಆಗ ಮಕ್ಕಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಕೇವಲ ರೋಮ್ಯಾನ್ಸ್ ಮಾಡಿದರೆ ಗರ್ಭಧಾರಣೆ ಆಗೋದಿಲ್ಲ. ಹೀಗಾಗಿ ನಿಮ್ಮ ಜತೆ ರೋಮ್ಯಾನ್ಸ್ ನಡೆಸಿದ ಬಳಿಕ ಅಥವಾ ಅದಕ್ಕೂ ಮೊದಲು ಅವಳು ಲೈಂಗಿಕ ಸಂಪರ್ಕ ಮಾಡಿರಲೇಬೇಕು.
ಗರ್ಭಿಣಿಯಾಗುವುದು ಪುರುಷ ಮತ್ತು ಮಹಿಳೆಯರ ಉತ್ತಮವಾದ ಸ್ಫರ್ಮ್ ಮೇಲೆ ಅವಲಂಬಿತವಾಗಿರುತ್ತದೆ. ಅನುಮಾನವಿದ್ದರೆ ವೈದ್ಯರನ್ನು ಭೇಟಿ ಮಾಡಿ. ಅಗತ್ಯಬಿದ್ದರೆ ಅವಳ ಡಿಎನ್ ಎ ಪರೀಕ್ಷೆ ನಡೆಸಲು ಹೇಳಿ. ಅದರಿಂದ ಅವಳು ಗರ್ಭ ಧರಿಸೋಕೆ ನೀವು ಕಾರಣನಾ ಅಥವಾ ಬೇರೆಯವರಾ ಅನ್ನೋದು ಗೊತ್ತಾಗಲಿದೆ.