ಹೃದಯಾಘಾತ ತಡೆಯಿರಿ..! ಆರೋಗ್ಯವಾಗಿರಿ..!!

ಶನಿವಾರ, 31 ಜುಲೈ 2021 (08:34 IST)
ಲಂಡನ್ ವಿಶ್ವವಿದ್ಯಾಲಯದ ತಜ್ಞರ ಪ್ರಕಾರ, ವಾರಕ್ಕೆ ಗರಿಷ್ಠ 105 ಗ್ರಾಂ ಆಲ್ಕೋಹಾಲ್ ಸೇವನೆಯು ಹೃದಯ ಸಂಬಂಧಿ ಕಾಯಿಲೆ (ಸಿವಿಡಿ) ಹೊಂದಿರುವ ರೋಗಿಗಳಲ್ಲಿ ಹೃದಯಾಘಾತ, ಪಾರ್ಶ್ವವಾಯು, ಆಂಜಿನಾ ಅಥವಾ ಸಾವಿನ ಅಪಾಯ ಕಡಿಮೆ ಮಾಡುತ್ತದೆ ಎಂದು ವರದಿ ಮಾಡಿದೆ.

ಕುಡಿಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳನ್ನು ಹಲವು ಪತ್ರಿಕೆ, ವೆಬ್ಸೈಟ್ಗಳು ಸಾರಿ ಸಾರಿ ಹೇಳುತ್ತವೆ, ಸಾಮಾನ್ಯವಾಗಿ ಹಿಂದಿನ ರಾತ್ರಿ ಅತಿಯಾದ ಕುಡಿಯುವಿಕೆಯಿಂದ ನಿಮಗೆ ತಲೆನೋವು ಉಂಟಾಗಬಹುದು. ಆದರೆ ಇದು ಅರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ, ಆದರೆ ಜನರು ಇದು ಅನಾರೋಗ್ಯದ ಲಕ್ಷಣ ಎಂದು ಹೇಳುತ್ತಾರೆ. ಆದರೆ ಇದು ಸತ್ಯವಲ್ಲ, ಈ ವಿಷಯ ನಿಮಗೆ ಅಚ್ಚರಿ ಎನಿಸಿದರೂ ಬಿಯರ್ನ ಆರೋಗ್ಯದ ಅನುಕೂಲಗಳು ಸಮರ್ಥನೀಯ. ಇತ್ತೀಚಿನ ಅಧ್ಯಯನದ ಪ್ರಕಾರ ಒಂದು ವಾರ ಪ್ರತಿ ದಿನ ಅಂದಾಜು ಒಂದು ಪಿಂಟ್ ಕುಡಿಯುವುದರಿಂದ ಹೃದಯ ರಕ್ತನಾಳದ ಕಾಯಿಲೆಯ (ಸಿವಿಡಿ) ಮಾರಕ ಪರಿಣಾಮಗಳನ್ನು ತಡೆಯಬಹುದು ಎಂದು ವರದಿಯಾಗಿದೆ.
ಈ ಕುರಿತು ಹಲವು ಸಂಶೋಧನೆಗಳು ನಡೆಯುತ್ತಲೇ ಇವೆ. ಇದೀಗ, ವಾಷಿಂಗ್ಟನ್ ವಿಶ್ವವಿದ್ಯಾಲಯದ ಆರೋಗ್ಯ ಮಾಪನ ಮತ್ತು ಮೌಲ್ಯಮಾಪನ ವಿಶ್ವವಿದ್ಯಾಲಯದ ಸಾಂಸ್ಥಿಕ ಅಭಿವೃದ್ಧಿ ಮತ್ತು ತರಬೇತಿಯ ಹಿರಿಯ ನಿರ್ದೇಶಕರಾದ ಎಮ್ಯಾನುಯೆಲಾ ಗಕಿದೌ ಈ ಅಧ್ಯಯನವು ಈಗಾಗಲೇ ಹೃದಯದ ತೊಂದರೆ ಹೊಂದಿರುವ ಜನರಿಗೆ ಅನ್ವಯಿಸುತ್ತದೆ ಎಂದು ಉಲ್ಲೇಖಿಸಿದ್ದಾರೆ.
ಸಂಶೋಧನಾ ಲೇಖಕ ಚೆಂಗಿ ಡಿಂಗ್ ಅವರ ಪ್ರಕಾರ, ಸಿವಿಡಿ ಹೊಂದಿರುವ ರೋಗಿಗಳು ಹೆಚ್ಚು ಹೃದಯಾಘಾತ, ಪಾರ್ಶ್ವವಾಯು ಅಥವಾ ಆಂಜಿನಾವನ್ನು ತಡೆಗಟ್ಟಲು ಕುಡಿಯುವುದನ್ನು ನಿಲ್ಲಿಸಬೇಕಿಲ್ಲ ಎಂದು ನಮ್ಮ ಸಂಶೋಧನೆಗಳು ಸೂಚಿಸುತ್ತವೆ ಎಂದು ತಿಳಿಸಿದ್ದಾರೆ.
ಆದರೆ ಹೃದ್ರೋಗ ಹೊಂದಿರುವ ರೋಗಿಗಳು ಕುಡಿಯುವಿಕೆಯ ಪ್ರಮಾಣದ ಮೇಲೆ ಹಿಡಿತವನ್ನು ಹೊಂದಿರಬೇಕು. ತಮ್ಮ ಸಾಪ್ತಾಹಿಕ ಆಲ್ಕೊಹಾಲ್ ಸೇವನೆಯನ್ನು ಕಡಿಮೆ ಮಾಡಲು ನಾವು ಸೂಚಿಸುತ್ತೇವೆ. ಏಕೆಂದರೆ ಇತರ ಕಾಯಿಲೆಗಳ ಅಪಾಯ ಹೆಚ್ಚಿಸಬಹುದು ಎಂದು ಹೇಳಿದ್ದಾರೆ. ಆದರೆ, ಕುಡಿಯದ ಸಿವಿಡಿ ರೋಗಿಗಳಿಗೆ ಕುಡಿತಯುವಿಕೆಯನ್ನು ಪ್ರಾರಂಭಿಸಲು ಒತ್ತಾಯಿಸಬಾರದು. ಅದು ಅಪಾಯಕಾರಿ ಎಂದು ಹೇಳಿದ್ದಾರೆ.
ಲಂಡನ್ ವಿಶ್ವವಿದ್ಯಾಲಯದ ತಜ್ಞರ ಪ್ರಕಾರ, ವಾರಕ್ಕೆ ಗರಿಷ್ಠ 105 ಗ್ರಾಂ ಆಲ್ಕೋಹಾಲ್ ಸೇವನೆಯು ಹೃದಯ ಸಂಬಂಧಿ ಕಾಯಿಲೆ (ಸಿವಿಡಿ) ಹೊಂದಿರುವ ರೋಗಿಗಳಲ್ಲಿ ಹೃದಯಾಘಾತ, ಪಾರ್ಶ್ವವಾಯು, ಆಂಜಿನಾ ಅಥವಾ ಸಾವಿನ ಅಪಾಯ ಕಡಿಮೆ ಮಾಡುತ್ತದೆ ಎಂದು ವರದಿ ಮಾಡಿದೆ. ಇದು 13 ಬ್ರಿಟಿಷ್ ಘಟಕಗಳ ಆಲ್ಕೋಹಾಲ್, 6 ಪಿಂಟ್ಗಳಿಗಿಂತ ಕಡಿಮೆ ಮಧ್ಯಮ ಬಿಯರ್ ಅಥವಾ ಒಂದಕ್ಕಿಂತ ಹೆಚ್ಚು ಬಾಟಲಿ ವೈನ್ಗೆ ಸಮನಾಗಿರುತ್ತದೆ.ಈ ಪ್ರಮಾಣದ ಆಲ್ಕೋಹಾಲ್ ಅರೋಗ್ಯಕರವಾಗಿ ಒಳ್ಳೆಯದು ಎಂದು ಲಂಡನ್ ವಿಶ್ವವಿದ್ಯಾಲಯದ ತಜ್ಞರ ತಂಡ ವರದಿ ಮಾಡಿದೆ. ಬ್ರಿಟಿಷ್ ಬಯೋಬ್ಯಾಂಕ್, ಇಂಗ್ಲೆಂಡ್ನ ಆರೋಗ್ಯ ಸಮೀಕ್ಷೆ, ಸ್ಕಾಟ್ಲೆಂಡ್ನ ಆರೋಗ್ಯ ಸಮೀಕ್ಷೆ ಮತ್ತು ಹಿಂದಿನ 12 ಅಧ್ಯಯನಗಳಿಂದ ಡೇಟಾ ಸಂಗ್ರಹಿಸಿ 48,423 ಸಿವಿಡಿ ರೋಗಿಗಳಲ್ಲಿ ಸಂಭವಿಸಬಹುದಾದ ಅಪಾಯಗಳನ್ನು ಸಂಶೋಧಕರು ಲೆಕ್ಕಹಾಕಿದ್ದಾರೆ. ಇದರಿಂದ ತಿಳಿದು ಬಂದಿರುವುದು ಸಂಗತಿಯೆಂದರೆ ಕುಡಿಯದಿರುವ ಜನರಿಗೆ ಹೋಲಿಸಿದರೆ, ದಿನಕ್ಕೆ 62 ಗ್ರಾಂವರೆಗೆ ಆಲ್ಕೋಹಾಲ್ ಕುಡಿಯುವ ಜನರಿಗೆ ಯಾವುದೇ ಹೃದ್ರೋಗ ತೊಂದರೆಗಳು ಅಥವಾ ಸಾವಿನ ಅಪಾಯಗಳನ್ನು ಉಂಟುಮಾಡುವುದಿಲ್ಲ ಎಂದು ಸಂಶೋಧಕರು ಹಿಂದಿನ 12 ಅಧ್ಯಯನಗಳ ಡೇಟಾದಿಂದ ಕಂಡುಕೊಂಡಿದ್ದಾರೆ ಹಾಗೂ ಈ ಕುರಿತು ವರದಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ