ನಸುಕಿನ ರೋಮ್ಯಾನ್ಸ್ ಮಜವೋ ಮಜಾ…!

ಶನಿವಾರ, 23 ಮಾರ್ಚ್ 2019 (19:45 IST)
ನಸುಕಿನ ವೇಳೆ ಎದ್ದ ಕೂಡಲೆ ನಿಮ್ಮಾಕೆ ನಿಮಗೆ ಸುಂದರವಾಗಿ ಕಾಣಲು ಆರಂಭಿಸುತ್ತಾರೆ. ಪುರುಷರು ಬೆಳಗ್ಗೆ ಎದ್ದ ಕೂಡಲೆ ಮನ್ಮಥನ ಬಾಣಕ್ಕೆ ತುತ್ತಾದವರಂತೆ ಆಡುತ್ತಾರೆ ಅಲ್ಲವೇ? ನಿಜ ಏಕೆಂದರೆ ಬೆಳಗಿನ ಆ ವಾತಾವರಣವೇ ಹಾಗೆ ಮನ್ಮಥ ಲೀಲೆಗೆ ಹೇಳಿ ಮಾಡಿಸಿದ ರೀತಿಯಲ್ಲಿ ಇರುತ್ತದೆ.

ಬೆಳಗ್ಗೆ ನಿದ್ದೆ ಮಾಡಿ, ಮೈ ಮನಸ್ಸು ಹಗುರ ಮಾಡಿಕೊಂಡಿರುವ ಇವರಿಗೆ ಬಯಕೆಗಳು ಆರಂಭವಾಗುವ ಕಾಲ ಇದಾಗಿರುತ್ತದೆ.
ಅದಕ್ಕೆ ಪುರುಷರಿಗೆ ಬೆಳಗ್ಗೆ ಬಹುತೇಕ ಪಾಲು ಅವರ ಲಿಂಗ ನಿಮಿರಿರುತ್ತದೆ. ಇಲ್ಲವೆ ಬೇಗ ನಿಮಿರಲು ಆರಂಭಿಸುತ್ತದೆ. ಅದಕ್ಕೆ ಕಾರಾಣವೇನು?

ಕುತೂಹಲಕರ ವಿಚಾರವೇನೆಂದರೆ ಪುರುಷರಲ್ಲಿ ಟೆಸ್ಟೋಸ್ಟಿರೋನ್ ಮಟ್ಟವು ಮುಂಜಾನೆ ಎದ್ದ ಕೂಡಲೆ ಹೆಚ್ಚಾಗಿರುತ್ತದೆ. ಆದರೆ ಮಹಿಳೆಯರಲ್ಲಿ ಟೆಸ್ಟೋಸ್ಟಿರೋನ್ ಮಟ್ಟವು ಸ್ರವಿಸುವುದಾದರೂ ಅದು ಕಡಿಮೆ ಇರುತ್ತದೆ. ರಾತ್ರಿಯ ಹೊತ್ತು ಈ ಪ್ರಮಾಣ ಅವರಲ್ಲಿ ಅಧಿಕವಾಗಿರುತ್ತದೆ. ಅದೇ ಕಾರಣಕ್ಕಾಗಿ ಪುರುಷರು ಬೆಳಗ್ಗೆ ಲೈಂಗಿಕ ಕ್ರಿಯೆಯನ್ನು ಬಯಸಿದರೆ, ಮಹಿಳೆಯರು ರಾತ್ರಿಗೆ ಬಯಸುತ್ತಾರೆ.   ಪುರುಷರಲ್ಲಿ ಟೆಸ್ಟೋಸ್ಟಿರೋನ್ ಮಟ್ಟವು ಬೆಳಗ್ಗೆ ಅಧಿಕವಾಗಿರುತ್ತದೆ. ಅಧ್ಯಯನಗಳ ಪ್ರಕಾರ ರಾತ್ರಿ ಗಾಢವಾಗಿ ನಿದ್ದೆ ಮಾಡುವ ವ್ಯಕ್ತಿಗಳಲ್ಲಿ ಟೆಸ್ಟೋಸ್ಟಿರೋನ್ ಮಟ್ಟವು ಬೆಳಗ್ಗೆ ಹೆಚ್ಚಾಗಿರುತ್ತದೆಯಂತೆ.

ಪುರುಷರು ದಿನವಿಡೀ ಟೆಸ್ಟೋಸ್ಟಿರೋನ್ ಹಾರ್ಮೋನ್ ಅನ್ನು ಉತ್ಪಾದಿಸುತ್ತಲೆ ಇರುತ್ತಾರೆ. ಆಗ ನರವ್ಯೂಹವು ಪುರುಷರನ್ನು ಫ್ಲರ್ಟ್ ಮಾಡಲು ಪ್ರಚೋದಿಸುತ್ತದೆ.  ಇದು ದಿನವಿಡೀ ನಡೆಯುವ ಪ್ರಕ್ರಿಯೆಯಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ