ದಾಳಿಂಬೆ ಹಣ್ಣಿನಿಂದ ಇಷ್ಟೆಲ್ಲಾ ಉಪಯೋಗಗಳಿವೆಯಂತೆ..!!

ಮಂಗಳವಾರ, 19 ಜೂನ್ 2018 (16:37 IST)
ಉತ್ತಮ ಆರೋಗ್ಯಕ್ಕೆ ಕೇವಲ ಹಸಿರು ಜ್ಯೂಸ್‌ಗಳು ಮಾತ್ರ ಆಯ್ಕೆಗಳಲ್ಲ. ನಿಮ್ಮ ಆಹಾರದಲ್ಲಿ ದಾಳಿಂಬೆಯನ್ನು ಸೇರಿಸಿಕೊಂಡರೆ ಅದು ದೀರ್ಘಕಾಲಿಕ ರೋಗ ಮತ್ತು ಉರಿಯೂತದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ದಾಳಿಂಬೆ ಹಣ್ಣನ್ನು ಸಾವಿರಾರು ವರ್ಷಗಳಿಂದ ಔಷಧವಾಗಿ ಬಳಸಲಾಗುತ್ತಿದೆ.

ದಾಳಿಂಬೆ ರಸವು ಕ್ಯಾನ್ಸರ್ ತಡೆಗಟ್ಟಲು, ಪ್ರತಿರಕ್ಷಣಾ ಬೆಂಬಲ ಮತ್ತು ಫಲವತ್ತತೆಗೆ ಸಹಾಯ ಮಾಡಬಹುದಾಗಿದೆ. ದಾಳಿಂಬೆಯು ಹೆಚ್ಚಿನ ವಿಟಮಿನ್ ಸಿ ಮತ್ತು ವಿಟಮಿನ್ ಇ ಪ್ರಮಾಣವನ್ನು ಹೊಂದಿದೆ. ಹಾಗಾಗಿ ದಾಳಿಂಬೆ ರಸದ ಉಪಯೋಗಗಳನ್ನು ತಿಳಿದುಕೊಳ್ಳಬೇಕಿದೆ.
 
*ಆಂಟಿಆಕ್ಸಿಡೆಂಟ್‌ಗಳು - ದಾಳಿಂಬೆ ಬೀಜಗಳು ಕೆಂಪು ಬಣ್ಣವನ್ನು ಪೊಲಿಫಿನೋಲ್‌ಗಳಿಂದ ಪಡೆಯುತ್ತವೆ. ಈ ರಾಸಾಯನಿಕಗಳು ಪ್ರಬಲವಾದ ಆಂಟಿಆಕ್ಸಿಡೆಂಟ್‌ಗಳಾಗಿವೆ. ದಾಳಿಂಬೆ ರೆಡ್ ವೈನ್ ಮತ್ತು ಗ್ರೀನ್ ಟೀಗಿಂತ ಮೂರು ಪಟ್ಟು ಹೆಚ್ಚು ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿದೆ. ಇದು ಸ್ವತಂತ್ರ ರಾಡಿಕಲ್‌ಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ, ಜೀವಕೋಶಗಳು ಹಾನಿಗೊಳಗಾಗುವುದನ್ನು ತಪ್ಪಿಸುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ.
 
*ಹೆಚ್ಚಿನ ವಿಟಮಿನ್ ಸಿ ಪ್ರಮಾಣ - ಒಂದು ದಾಳಿಂಬೆ ಹಣ್ಣಿನ ಜ್ಯೂಸ್‌ನಲ್ಲಿ ನಿಮ್ಮ ದೈನಂದಿನ ಅಗತ್ಯಕ್ಕಿಂತ 40% ರಷ್ಟು ಹೆಚ್ಚು ವಿಟಮಿನ್ ಸಿ ಲಭ್ಯವಿರುತ್ತದೆ. ಆದರೆ ದಾಳಿಂಬೆ ರಸವನ್ನು ಪಾಶ್ಚೀಕರಿಸಿ ಸೇವಿಸಿದರೆ ಅದರಲ್ಲಿನ ವಿಟಮಿನ್ ಸಿ ಪ್ರಮಾಣ ಕಡಿಮೆಯಾಗಬಹುದಾಗಿದೆ, ಆದ್ದರಿಂದ ಯಾವಾಗಲೂ ಮನೆಯಲ್ಲಿಯೇ ತಾಜಾ ದಾಳಿಂಬೆ ರಸವನ್ನು ಮಾಡಿ ಕುಡಿಯಿರಿ.
 
*ಕ್ಯಾನ್ಸರ್ ತಡೆಗಟ್ಟುತ್ತದೆ - ಪ್ರಾಸ್ಟೇಟ್ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯಲು ದಾಳಿಂಬೆ ಸಹಾಯ ಮಾಡಬಹುದು ಎಂದು ಸಂಶೋಧಕರು ಕಂಡುಕೊಂಡಾಗ ಅದು ದೊಡ್ಡ ಸುದ್ದಿಯಾಗಿತ್ತು. ಪ್ರಾಸ್ಟೇಟ್ ಕ್ಯಾನ್ಸರ್ ಮೇಲೆ ದಾಳಿಂಬೆ ರಸದ ಪರಿಣಾಮದ ಕುರಿತು ಹಲವಾರು ಸಂಶೋಧನೆಗಳು ನಡೆಯುತ್ತಿದ್ದರೂ ಫಲಿತಾಂಶಗಳು ಇನ್ನೂ ಸ್ಪಷ್ಟವಾಗಿ ಬಂದಿಲ್ಲ. ದಾಳಿಂಬೆ ರಸ ನಿಮ್ಮ ಕ್ಯಾನ್ಸರ್ ಅನ್ನು ಕಡಿಮೆ ಮಾಡುತ್ತದೆ ಅಥವಾ ತಡೆಗಟ್ಟುತ್ತದೆ ಎಂದು ಪ್ರಮಾಣೀಕರಿಸುವ ಯಾವುದೇ ದೀರ್ಘಕಾಲದ ಅಧ್ಯಯನಗಳು ಇಲ್ಲದೇ ಹೋದರೂ ಅದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಲ್ಲ.
 
*ಆಲ್ಝೈಮರ್ ಅಥವಾ ನೆನಪಿನ ಶಕ್ತಿಯನ್ನು ಕಳೆದುಕೊಳ್ಳುವ ಕಾಯಿಲೆಯಿಂದ ರಕ್ಷಿಸುತ್ತದೆ - ದಾಳಿಂಬೆಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಆಲ್ಝೈಮರ್ ಅಥವಾ ನೆನಪಿನ ಶಕ್ತಿಯನ್ನು ಕಳೆದುಕೊಳ್ಳುವ ಕಾಯಿಲೆಯ ಪ್ರಗತಿಯನ್ನು ಸ್ಥಗಿತಗೊಳಿಸುತ್ತದೆ ಮತ್ತು ನೆನಪಿನ ಶಕ್ತಿಯನ್ನು ರಕ್ಷಿಸುತ್ತದೆ ಎಂದು ಹೇಳುತ್ತಾರೆ.
 
*ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ - ದಾಳಿಂಬೆಯು ಕರುಳಿನ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಕ್ರೋನ್ಸ್ ರೋಗ, ಅಲ್ಸರೇಟಿವ್ ಕೊಲೈಟಿಸ್ ಮತ್ತು ಇತರ ಕರುಳಿನ ಉರಿಯೂತದ ಕಾಯಿಲೆಗಳಿಗೆ ಇದು ಪ್ರಯೋಜನಕಾರಿಯಾಗಿದೆ.
 
*ಸಂಧಿವಾತವನ್ನು ಕಡಿಮೆ ಮಾಡುತ್ತದೆ - ಅಸ್ಥಿಸಂಧಿವಾತ ಮತ್ತು ಮೃದ್ವಸ್ಥಿಗೆ ಹಾನಿಯುಂಟುಮಾಡುವ ಉರಿಯೂತವನ್ನು ತಡೆಯಲು ದಾಳಿಂಬೆಯಲ್ಲಿರುವ ಫ್ಲೇವೊನೊಲ್ಸ್ ಸಹಾಯ ಮಾಡುತ್ತದೆ. ಪ್ರಸ್ತುತ ಆಸ್ಟಿಯೊಪೊರೋಸಿಸ್, ಸಂಧಿವಾತ ಮತ್ತು ಇತರ ರೀತಿಯ ಸಂಧಿವಾತ ಮತ್ತು ಜಂಟಿ ಉರಿಯೂತದ ಮೇಲಿನ ದಾಳಿಂಬೆಯ ಪರಿಣಾಮದ ಕುರಿತು ಅಧ್ಯಯನಗಳು ನಡೆಯುತ್ತಿವೆ.
 
*ಹೃದಯದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ - ದಾಳಿಂಬೆಯು ಹೃದಯದ ಆರೋಗ್ಯಕ್ಕೆ ಅತ್ಯುತ್ತಮವಾದುದಾಗಿದೆ. ಇದು ಹೃದಯ ಮತ್ತು ಅಪಧಮನಿಗಳನ್ನು ರಕ್ಷಿಸುತ್ತದೆ. ದಾಳಿಂಬೆ ರಸವು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ಅಪಧಮನಿಗಳು ಗಟ್ಟಿಯಾಗುವುದನ್ನು ಮತ್ತು ದಪ್ಪವಾಗುವುದನ್ನು ತಡೆಗಟ್ಟುತ್ತದೆ ಮತ್ತು ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ ಎಂದು ಹೇಳುತ್ತಾರೆ. ಆದರೆ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಔಷಧಗಳೊಂದಿಗೆ ದಾಳಿಂಬೆಯನ್ನು ಸೇವಿಸಿದರೆ ಅದು ವ್ಯತಿರಿಕ್ತವಾಗಿ ಪರಿಣಾಮ ಬೀರುವ ಸಾಧ್ಯತೆಗಳಿವೆ.
 
*ಉರಿಯೂತವನ್ನು ಕಡಿಮೆ ಮಾಡುತ್ತದೆ - ಹೆಚ್ಚಿನ ಆಂಟಿಆಕ್ಸಿಡೆಂಟ್‌ಗಳ ಕಾರಣದಿಂದ ದಾಳಿಂಬೆ ರಸವು ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದು ದೇಹದಾದ್ಯಂತ ಉರಿಯೂತವನ್ನು ಕಡಿಮೆ ಮಾಡಲು ಮತ್ತು ಉತ್ಕರ್ಷಣಶೀಲ ಒತ್ತಡ ಮತ್ತು ಹಾನಿಯನ್ನು ತಡೆಯಲು ಸಹಾಯ ಮಾಡುತ್ತದೆ.
 
*ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ - ದಿನವೂ ದಾಳಿಂಬೆ ರಸವನ್ನು ಸೇವಿಸಿದರೆ ಅದು ಕಡಿಮೆ ಸಂಕೋಚನದ ರಕ್ತದೊತ್ತಡಕ್ಕೆ ಸಹಾಯ ಮಾಡುತ್ತದೆ. ಆದರೆ ದೀರ್ಘಕಾಲದಲ್ಲಿ ಸಂಪೂರ್ಣ ರಕ್ತದೊತ್ತಡವನ್ನು ದಾಳಿಂಬೆ ಕಡಿಮೆ ಮಾಡಬಹುದೇ ಎಂಬದನ್ನು ಕುರಿತು ಇನ್ನಷ್ಟು ಅಧ್ಯಯನಗಳು ನಡೆಯಬೇಕಿದೆ.
 
*ಆಂಟಿವೈರಲ್ ಆಗಿದೆ - ವಿಟಮಿನ್ ಸಿ ಮತ್ತು ವಿಟಮಿನ್ ಇ ಅನ್ನು ಒಳಗೊಂಡಂತೆ ಇತರ ಪ್ರತಿರಕ್ಷಣೆಯನ್ನು ಉತ್ತೇಜಿಸುವ ಪೋಷಕಾಂಶಗಳನ್ನು ಹೊಂದಿರುವ ದಾಳಿಂಬೆಯು ಸೋಂಕಿನೊಂದಿಗೆ ಹೋರಾಡಿ ಅನಾರೋಗ್ಯವನ್ನು ತಡೆಗಟ್ಟುತ್ತದೆ. ದಾಳಿಂಬೆಯು ಜೀವವಿರೋಧಿ ಮತ್ತು ವೈರಸ್ ವಿರೋಧಿ ಎನ್ನುವುದನ್ನು ಅಧ್ಯಯನಕಾರರು ಸಾಬೀತುಪಡಿಸಿದ್ದಾರೆ.
 
*ಹೆಚ್ಚಿನ ವಿಟಮಿನ್‌ಗಳನ್ನು ಹೊಂದಿದೆ - ದಾಳಿಂಬೆಯು ವಿಟಮಿನ್ ಸಿ ಮತ್ತು ಇ ಜೊತೆಗೆ ಫೋಲೇಟ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಕೆ ಯ ಉತ್ತಮ ಮೂಲವಾಗಿದೆ. ನಿಮ್ಮ ದೈನಂದಿನ ಆಹಾರದಲ್ಲಿ ನೀವು ದಾಳಿಂಬೆ ರಸವನ್ನು ಸೇರಿಸಿಕೊಳ್ಳಲು ಇಷ್ಟಪಟ್ಟರೆ ಅದನ್ನು ಸಕ್ಕರೆ ಇಲ್ಲದೇ ಸೇವಿಸಬೇಕು ಮತ್ತು ಅದು ತಾಜಾ ದಾಳಿಂಬೆ ರಸವಾಗಿರಬೇಕು.
 
*ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ - ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ ದಿನವೂ 8 ಔನ್ಸ್ ತಾಜಾ ದಾಳಿಂಬೆ ರಸವನ್ನು ಕುಡಿದರೆ ಕಲಿಯುವಿಕೆ ಮತ್ತು ನೆನಪಿನ ಶಕ್ತಿ ವೃದ್ಧಿಸುತ್ತದೆ ಎಂದು ಹೇಳುತ್ತಾರೆ.
 
*ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ - ಮಧ್ಯಪ್ರಾಚ್ಯ ಮತ್ತು ಭಾರತದಲ್ಲಿ ದಾಳಿಂಬೆಯನ್ನು ಸಕ್ಕರೆ ಕಾಯಿಲೆಗೆ ಪರಿಹಾರವಾಗಿ ಬಳಸಲಾಗುತ್ತದೆ. ಇದು ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡಲು ಮತ್ತು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
 
*ದಾಳಿಂಬೆ ರಸವು ದೇಹದ ಕಾರ್ಯಕ್ಷಮತೆಯನ್ನು ವೃದ್ಧಿಸುತ್ತದೆ. ಇದು ನೋವನ್ನು ಕಡಿಮೆ ಮಾಡಲು ಮತ್ತು ದೇಹಕ್ಕೆ ಚೈತನ್ಯವನ್ನು ಒದಗಿಸಲು ಸಹಾಯ ಮಾಡುತ್ತದೆ. ವ್ಯಾಯಾಮದಿಂದ ಉಂಟಾಗುವ ಉತ್ಕರ್ಷಣಾ ಹಾನಿಯನ್ನು ಕಡಿಮೆ ಮಾಡುತ್ತದೆ.
 
ಮಾರುಕಟ್ಟೆಯಲ್ಲಿ ನಿಮಗೆ ಹಲವು ಬ್ರ್ಯಾಂಡ್‌ಗಳ ದಾಳಿಂಬೆ ರಸಗಳು ದೊರೆಯುತ್ತವೆ. ಆದರೆ ನೀವೇ ಮನೆಯಲ್ಲಿ ತಯಾರಿಸಿಕೊಂಡ ತಾಜಾ ದಾಳಿಂಬೆ ರಸ ನಿಮ್ಮ ಆರೋಗ್ಯಕ್ಕೆ ಹೆಚ್ಚು ಉತ್ತಮವಾದುದಾಗಿದೆ. ದಿನವೂ ದಾಳಿಂಬೆ ರಸವನ್ನು ಕುಡಿಯುವ ಮೊದಲು ಅದು ನಿಮ್ಮ ಯಾವುದೇ ಔಷಧಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುವುದಿಲ್ಲ ಎನ್ನುವುದನ್ನು ವೈದ್ಯರಲ್ಲಿ ಕೇಳಿ ಖಚಿತಪಡಿಸಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ